ಶುಕ್ರವಾರ, ಜನವರಿ 24, 2020
28 °C

ವಿಶ್ವಕಪ್‌ ಹಾಕಿ: ಭಾರತಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಭಾರತ ತಂಡ ಇಲ್ಲಿ ನಡೆಯುತ್ತಿರುವ 10 ನೇ ಎಫ್‌ಐಎಚ್ ಜೂನಿಯರ್ ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಮೊದಲ ಗೆಲುವು ದಾಖಲಿಸಿದೆ.ಮೇಜರ್ ಧ್ಯಾನ್‌ಚಂದ್ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಭಾರತ 3–2 ರಲ್ಲಿ ಕೆನಡಾ ವಿರುದ್ಧ ಗೆಲುವು ಸಾಧಿಸಿತು. ಇದರೊಂದಿಗೆ ಕ್ವಾರ್ಟರ್ ಫೈನಲ್‌ ಪ್ರವೇಶದ ಕನಸನ್ನು ಜೀವಂತವಾಗಿರಿಸಿಕೊಂಡಿತು.ಭಾರತದ ಪರ ಮಂದೀಪ್ ಸಿಂಗ್ (30ನೇ ನಿಮಿಷ),  ಆಕಾಶ್‌ದೀಪ್ ಸಿಂಗ್  (57) ಮತ್ತು ಗುರ್ಜಿಂದರ್ ಸಿಂಗ್ (69) ಗೋಲು ಗಳಿಸಿ ಜಯದ ರೂವಾರಿಗಳೆನಿಸಿದರು.ಕೆನಡಾ ಪರ ಸುಖಿ ಪನೇಸರ್ (3) ಮತ್ತು ಗಾರ್ಡನ್ ಜಾನ್‌ಸ್ಟನ್‌ ( 51) ಗೋಲು ಗಳಿಸುವ ಮೂಲಕ ತೀವ್ರ ಪೈಪೋಟಿ ನೀಡಿದರು.

ಭಾರತ ತನ್ನ ಮುಂದಿನ ಪಂದ್ಯದಲ್ಲಿ ಕೊರಿಯಾ ವಿರುದ್ಧ ಪೈಪೋಟಿ ನಡೆಸಲಿದೆ. ಈ ಪಂದ್ಯದಲ್ಲಿ ಗೆಲುವು ಪಡೆದರೆ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಲಿದೆ.

ಪ್ರತಿಕ್ರಿಯಿಸಿ (+)