ವಿಶ್ವಕಪ್ ಕ್ರಿಕೆಟ್: ಭಾರತ ಮಹಿಳೆಯರಿಗೆ ಗೆಲುವು

7

ವಿಶ್ವಕಪ್ ಕ್ರಿಕೆಟ್: ಭಾರತ ಮಹಿಳೆಯರಿಗೆ ಗೆಲುವು

Published:
Updated:

ಕೊಲಂಬೊ (ಪಿಟಿಐ): ಭಾರತ ಮಹಿಳಾ ತಂಡ ವಿಶ್ವಕಪ್ ಟ್ವೆಂಟಿ-20 ಕ್ರಿಕೆಟ್ ಟೂರ್ನಿಯ `ಪ್ಲೇ ಆಫ್~ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 9 ವಿಕೆಟ್‌ಗಳ ಸುಲಭ ಜಯ ಪಡೆಯಿತು. ಈ ಮೂಲಕ 2014ರ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಗಿಟ್ಟಿಸಿತು.ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಂಕಾ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 100 ಪೇರಿಸಿತು. ಹ್ಯಾಟ್ರಿಕ್ ವಿಕೆಟ್ ಪಡೆದ ಏಕ್ತಾ ಬಿಸ್ಟ್ (16ಕ್ಕೆ 3) ಭಾರತದ ಪರ ಸಮರ್ಥ ಬೌಲಿಂಗ್ ನಡೆಸಿದರು. ಈ ಗುರಿ ಭಾರತಕ್ಕೆ ಕಠಿಣ ಎನಿಸಲಿಲ್ಲ. 14.4 ಓವರ್‌ಗಳಲ್ಲಿ ಒಂದು ವಿಕೆಟ್ ಕಳೆದುಕೊಂಡು 102 ರನ್ ಗಳಿಸಿ ಜಯ ಸಾಧಿಸಿತು.ಭಾರತ ಮಹಿಳೆಯರು ಲೀಗ್ ಹಂತದ ಎಲ್ಲ ಮೂರು ಪಂದ್ಯಗಳಲ್ಲಿ ಸೋಲು ಅನುಭವಿಸಿ ಟೂರ್ನಿಯ ಸೆಮಿಫೈನಲ್ ಪ್ರವೇಶಿಸಲು ವಿಫಲರಾಗಿದ್ದರು. ಇದರಿಂದ ಮುಂದಿನ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಲು `ಪ್ಲೇ ಆಫ್~ನಲ್ಲಿ ಆಡಬೇಕಾಯಿತು.ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 100 (ಚಾಮರಿ ಅಟಪಟ್ಟು 28, ಶಶಿಕಲಾ ಸಿರಿವರ್ದನೆ 23, ಏಕ್ತಾ ಬಿಸ್ಟ್ 16ಕ್ಕೆ 3). ಭಾರತ: 14.4 ಓವರ್‌ಗಳಲ್ಲಿ 1 ವಿಕೆಟ್‌ಗೆ 102 (ಪೂನಮ್ ರಾವತ್ ಔಟಾಗದೆ 45, ಮಿಥಾಲಿ ರಾಜ್ ಔಟಾಗದೆ 28)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry