ವಿಶ್ವಕಪ್ ಸಡಗರ

7

ವಿಶ್ವಕಪ್ ಸಡಗರ

Published:
Updated:

ಆರು ಅಡಿ ಅಗರಬತ್ತಿ

ವಿಶ್ವಕಪ್‌ನಲ್ಲಿ ಭಾರತ ತಂಡ ಗೆಲ್ಲಲಿ ಎಂದು ಹಾರೈಸಿ ಸೈಕಲ್ ಪ್ಯೂರ್ ಅಗರ್‌ಬತ್ತಿ 6 ಅಡಿ ಎತ್ತರದ ವಿಶೇಷ ಅಗರಬತ್ತಿ ಸಿದ್ಧಪಡಿಸಿದೆ. ಮಲ್ಲೇಶ್ವರದಲ್ಲಿ ನಡೆದ ಸಮಾರಂಭದಲ್ಲಿ ಮೇಯರ್ ಎಸ್.ಕೆ. ನಟರಾಜ್ ಈ ಊದುಕಡ್ಡಿ ಉರಿಸಿ ಶುಭ ಹಾರೈಸಿದರು. ನಂದನ ಸ್ಪರ್ಧೆ


ರವಿಚಂದರ್ ಸಮೂಹದ ಶ್ರೀ ನಂದಿನಿ ಪ್ಯಾಲೇಸ್ ಮತ್ತು ಶ್ರೀ ನಂದನ ಪ್ಯಾಲೇಸ್ ರೆಸ್ಟೋರೆಂಟ್‌ಗಳು ಬಾಯಲ್ಲಿ ನೀರೂರಿಸುವ ವರ್ಲ್ಡ್‌ಕಪ್ ವಿಶೇಷ ಮೆನು ಆಸ್ವಾದಿಸುತ್ತಲೇ ಬೃಹತ್ ಪರದೆಯ ಮೇಲೆ ಕ್ರಿಕೆಟ್ ನೋಡಲು ಅನುವು ಮಾಡಿಕೊಡುತ್ತಿವೆ. ಜತೆಗೆ ಪ್ರಶ್ನೆಗಳಿಗೆ ಉತ್ತರಿಸಿ ಪಾನೀಯ ಉಚಿತವಾಗಿ ಪಡೆಯಬಹುದು. ಅಂತಿಮ ಪಂದ್ಯದ ನಂತರ ಇಬೈಕ್ ಗೆಲ್ಲುವ ಅವಕಾಶ, ಉಡುಗೊರೆ, ರಿಯಾಯ್ತಿಗಳಿವೆ.ಇದು 25 ಮ್ಯಾಚ್‌ಗಳಿಗೆ ಸೀಮಿತ, ಏ.2ರ ವರೆಗೆ ಮಾತ್ರ ಈ ಸೌಲಭ್ಯ. ಮಾಹಿತಿಗೆ: 2563 0202. ಡೊಕೊಮೊ ಸ್ಪರ್ಧೆ

ಟಾಟಾ ಡೊಕೊಮೊ, ತನ್ನ ಗ್ರಾಹಕರೊಂದಿಗೆ ವಿಶ್ವಕಪ್ ಸಂಭ್ರಮ ಹಂಚಿಕೊಳ್ಳುತ್ತಿದೆ. ಅದಕ್ಕಾಗಿ 58 ನಾಟೌಟ್ ಮತ್ತು 103 ನಾಟೌಟ್ ರಿಚಾರ್ಜ್ ವೋಚರ್‌ಗಳನ್ನು ವಿಶೇಷವಾಗಿ ಪರಿಚಯಿಸಿದೆ. ಈ ವಿಶೇಷ ವೋಚರ್ ಗ್ರಾಹಕರು54321194ಗೆ ಕರೆ ಮಾಡಿ ಪ್ರತಿ ಪಂದ್ಯದ 5 ಮತ್ತು 10 ನಿಮಿುಷ ಉಚಿತ ಮಾಹಿತಿ ಪಡೆಯಬಹುದು.ಇದಲ್ಲದೆ ಧ್ವನಿ ಆಧಾರಿತ ‘ಗೆಸ್ ಮಾಸ್ಟರ್’ ಆಟಕ್ಕೆ ಒಂದು ತಿಂಗಳ ಉಚಿತ ಚಂದಾದಾರಿಕೆ ದೊರೆಯಲಿದೆ. ಗ್ರಾಹಕರು ದಿನದ ಟಾಸ್ ವಿಜೇತರನ್ನು, ಮ್ಯಾಚ್ ವಿಜೇತರನ್ನು, ಪ್ರತಿ ಇನ್ನಿಂಗ್ಸ್‌ನ ಸ್ಕೋರ್, ಪಂದ್ಯದಲ್ಲಿ ದಾಖಲಾದ 4 ಮತ್ತು 6 ಬಾಲ್‌ಗಳನ್ನು ಊಹಿಸಿ ಬಿಡ್ ಪಾಯಿಂಟ್ ಸಂಗ್ರಹಿಸಬಹುದು.ವಿಶ್ವಕಪ್ ಮುಗಿದ ನಂತರ ಒಟ್ಟಾರೆ ಅಂಕಗಳನ್ನು ಆಧರಿಸಿ ಟೀಂ ಇಂಡಿಯಾ ಜೆರ್ಸಿ, ಶೂ, ಐಪಾಡ್ ಮತ್ತು ಎಲ್‌ಸಿಡಿ ಟಿವಿಗಳನ್ನು ಬಹುಮಾನವಾಗಿ ನೀಡಲಾಗುವುದು. ಯಾರಾದರೂ ಟಾಟಾ ಡೊಕೊಮೊದಿಂದ ಕರೆ ಮಾಡಿದರೆ, ಪ್ರತಿ ಸಲ ಲೈವ್ ಸ್ಕೋರ್ ಕೇಳುವ ಅವಕಾಶವೂ ಇದೆ.   ವರ್ಲ್ಡ್ ಕಪ್ ಮೆನು

ಕೋರಮಂಗಲ ಮತ್ತು ಲ್ಯಾವೆಲ್ಲೆ ರಸ್ತೆಯ ಮೋಚಾ ರೆಸ್ಟೊರೆಂಟ್, ವಿಶ್ವಕಪ್ ಸಂದರ್ಭಕ್ಕೆಂದೇ ವಿಶೇಷ ಮೆನು ತಯಾರಿಸಿದೆ. ಸಸ್ಯಾಹಾರಿಗಳಿಗೆ ಶೆಜ್ವಾನ್ ಮೆರಿನೇಟೆಡ್ ಬೇಬಿ ಕಾರ್ನ್, ಚೀಸ್ ಡೈನಾಬೈಟ್, ಮಾಂಸಾಹಾರಿಗಳಿಗೆ ಕೋಲಾ ಮೆರಿನೇಟೆಡ್ ಚಿಕನ್ ವಿಂಗ್, ಬೇಸಿಲ್ ಚಿಲ್ಲಿ, ಲ್ಯಾಂಬ್‌ಗಳು ಕಾದಿವೆ.ವಿಡಿಯೋಕಾನ್

ವಿಶ್ವಕಪ್ ಕ್ರಿಕೆಟ್ ಹಂಗಾಮು ಪ್ರಾರಂಭವಾಗಿದೆ. ಯುವಜನರು ಮಾತ್ರವಲ್ಲದೆ ಎಲ್ಲರ ಬಾಯಲ್ಲೂ ವಿಶ್ವಕಪ್‌ದೇ ಮಾತು.

ಈ ಹಂಗಾಮಿಗೆ ಹುರುಪು ತುಂಬಲು ಎಲೆಕ್ಟ್ರಾನಿಕ್ ಸಾಧನಗಳಿಗೆ ಹೆಸರಾದ ವಿಡಿಯೋಕಾನ್ ‘ವಿಡಿಯೋಕಾನ್ ಗೋಲ್ಡ್ ಕಪ್’ ಸ್ಪರ್ಧೆ ಆಯೋಜಿಸಿದೆ. ಇದರಡಿ ಗ್ರಾಹಕರು ಎಲ್‌ಸಿಡಿ, ಎಲ್‌ಇಡಿ, ಡಿ2ಎಚ್ ಉಪಗ್ರಹ ಎಲ್‌ಸಿಡಿ ಅಥವಾ ಸ್ಲಿಟ್ ಎಸಿ ಖರೀದಿಸಿದರೆ ಸ್ಕ್ರಾಚ್ ಕಾರ್ಡ್ ದೊರೆಯುತ್ತದೆ. ಅದೃಷ್ಟಶಾಲಿಗಳು 22 ಕ್ಯಾರಟ್ ಬಂಗಾರದಿಂದ ಹಿಡಿದು 8 ಸಾವಿರ ರೂ ಮೊತ್ತದ ವರೆಗಿನ ವಿವಿಧ ಉಡುಗೊರೆಗಳನ್ನು ಗೆಲ್ಲಬಹುದು.ಸಂತೂರ್‌ನಲ್ಲಿ ಕುಂಬ್ಳೆ

ವಿಶ್ವಕಪ್ ಸಡಗರದ ನಡುವೆಯೇ ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಸ್ನಾನದ ಸಾಬೂನು ‘ಸಂತೂರ್’ನ ಬ್ರಾಂಡ್ ಅಂಬಾಸಿಡರ್ ಆಗಿ ಟಿವಿ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ಸಂತೂರ್ ಮಹಿಳೆ’ ಕ್ರಿಕೆಟ್ ಆಟದಲ್ಲಿ ಹುಡುಗರ ತಂಡವನ್ನು ಸೋಲಿಸುವುದು ಈ ಜಾಹೀರಾತಿನ ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry