ಶನಿವಾರ, ಮೇ 21, 2022
23 °C

ವಿಶ್ವಕರ್ಮ ಅಭಿವೃದ್ಧಿ ನಿಗಮ ಸ್ಥಾಪನೆಗೆ ಹರ್ಷ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಕ್ಷ್ಮೇಶ್ವರ: ರಾಜ್ಯ ಕಾಂಗ್ರೆಸ್ ಸರ್ಕಾರ ವಿಶ್ವಕರ್ಮ ಬ್ರಾಹ್ಮಣರ ಅಭಿವೃದ್ಧಿಗಾಗಿ ವಿಶೇಷ ನಿಗಮ ಸ್ಥಾಪನೆ ಮಾಡಿ ಅದರ ಅನುಷ್ಠಾನಕ್ಕಾಗಿ ಐದು ಕೋಟಿ ರೂಪಾಯಿ ನೀಡಿರುವ ಹಿನ್ನೆಲೆಯಲ್ಲಿ ಅಖಿಲ ಕರ್ನಾಟಕ  ವಿಶ್ವಕರ್ಮ ಮಹಾ ಸಭಾ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಸರ್ಕಾರವನ್ನು ಅಭಿನಂದಿಸಿದೆ.ಪಟ್ಟಣದಲ್ಲಿ ಶನಿವಾರ ಜರುಗಿದ ಅಭಿನಂದನಾ ಸಮಾರಂಭದಲ್ಲಿ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾದ ಜಿಲ್ಲಾ ಘಟಕದ ಕಾರ್ಯದರ್ಶಿ  ಎಸ್.ಡಿ. ಕಡ್ಲಿಕೊಪ್ಪ ಮಾತನಾಡಿ, ವಿಶ್ವಕರ್ಮ ನಿಗಮ ಸ್ಥಾಪನೆಗಾಗಿ ಕಳೆದ 13 ವರ್ಷಗಳಿಂದ ಸರ್ಕಾರದ ಮೇಲೆ ಒತ್ತಡ ಹಾಕಲಾಗಿತ್ತು. ಆದರೆ ಇದುವರೆಗೆ ಯಾರೂ ಈ ಕಾರ್ಯ ಮಾಡಿರಲಿಲ್ಲ.

ಆದರೆ ಇದೀಗ ಮುಖ್ಯ ಮಂತ್ರಿ ಸಿದ್ಧರಾಮಯ್ಯನವರು ತಮ್ಮ ಬಜೆಟ್‌ನಲ್ಲಿ ವಿಶ್ವಕರ್ಮ ಬ್ರಾಹ್ಮಣರ ಅಭಿವೃದ್ಧಿಗಾಗಿ ವಿಶೇಷ ನಿಗಮ ಸ್ಥಾಪನೆ ಮಾಡಿದ್ದು ಸ್ವಾಗತಾರ್ಹ ಕ್ರಮವಾ ಗಿದ್ದು, ಕೆ.ಪಿ.ನಂಜುಂಡಿ ಅವರ ಪಾತ್ರ ಸ್ಮರಣೀಯವಾಗಿದೆ ಎಂದರು.ಮಹಾಸಭಾದ ತಾಲ್ಲೂಕು ಘಟಕದ ಉಪಾಧ್ಯಕ್ಷ ಶಿವಣ್ಣ ಬಡಿಗೇರ  ಮಾತ ನಾಡಿದರು. ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ವಿ. ಕಮ್ಮಾರ, ಪುರಸಭೆ ಸದಸ್ಯ ಸೋಮಣ್ಣ ಸುತಾರ, ಮಾಜಿ ಸದಸ್ಯ ಅಶೋಕ ಸೊರಟೂರ, ವಕೀಲ ಐ.ಜಿ. ಹುಲಬಜಾರ, ಜಯಣ್ಣ ಗೋರ ಗಾಂವಕರ್, ಪರಮೇಶ್ವರ ಬಡಿಗೇರ, ಶ್ರೀಕಾಂತ ಬಡಿಗೇರ,  ಎಚ್.ಎಂ. ಸೊರ ಟೂರ, ಬಿ.ಎಂ. ಬಡಿಗೇರ, ಲಕ್ಷ್ಮಣ ಕಾಕೋಳ, ಈರಣ್ಣ ಬಡಿಗೇರ, ರಾಘವೇಂದ್ರ ಇಚ್ಚಂಗಿ, ಶ್ರೀಧರ ಪತ್ತಾರ, ಸಿ.ಎಂ.ಕದಡಿ ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.