ಮಂಗಳವಾರ, ನವೆಂಬರ್ 19, 2019
23 °C

ವಿಶ್ವಕರ್ಮ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ

Published:
Updated:

ಗುಲ್ಬರ್ಗ: ರಾಜ್ಯದಲ್ಲಿ 45ಲಕ್ಷಕ್ಕಿಂತ ಹೆಚ್ಚಿರುವ ವಿಶ್ವಕರ್ಮ ಜನಾಂಗವನ್ನು ಕಡೆಗಣಿಸುತ್ತಿರುವ ರಾಜಕೀಯ ಪಕ್ಷಗಳಿಗೆ ಸೆಡ್ಡು ಹೊಡೆಯಲು, 32 ವಿಧಾನಸಭಾ ಮತಕ್ಷೇತ್ರಗಳಲ್ಲಿ ತನ್ನದೇ ಜನಾಂಗದವರಿಗೆ ಸ್ವತಂತ್ರ ಅಭ್ಯರ್ಥಿಗಳನ್ನಾಗಿ ಸ್ಪರ್ಧೆಗಿಳಿಸಲು ವಿಶ್ವಕರ್ಮ ಸಮಾಜ ಮುಂದಾಗಿದೆ.ಮೊದಲಹಂತದ 11 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿರುವುದಾಗಿ ಹೈದರಾಬಾದ್ ಕರ್ನಾಟಕ ವಿಶ್ವಕರ್ಮ ಸಮಾಜ ಅಧ್ಯಕ್ಷ ವೀರೇಂದ್ರ ಇನಾಮದಾರ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಈರಣ್ಣ ಚಿದಾನಂದ ಪಂಚಾಳ ಅಫಜಲಪುರ, ಲಕ್ಷ್ಮೀಕಾಂತ ಹಾವನಪ್ಪ ಸೀತನೂರ  ಗುಲ್ಬರ್ಗ ಉತ್ತರ, ಮಹೇಶ ಮೋನಪ್ಪ ತಡಬಿಡಿ ಯಾದಗಿರಿ ನಗರ , ದೇವಿಂದ್ರಪ್ಪ ಸುಭಾಷ ವಿಶ್ವಕರ್ಮ ಶಹಾಪುರ, ಸುರೇಶ ಈಶ್ವರಪ್ಪ ತಾಳಮಡಗಿ ಬೀದರ್, ಮಹೇಶ ಪ್ರಲ್ಹಾದ ಪಂಚಾಳ ಬೀದರ್ ನಗರ, ಎಂ.ಜಿ. ಪತ್ತಾರ ತೆಲಗಿ ಬಸವನ ಭಾಗೇವಾಡಿ, ಎಂ.ಕೆ. ಪತ್ತಾರ ವಿಜಾಪುರ, ಪ್ರವಿಣ ಬಾಲು ಗಿರಿಗೌಕರ ವಿಜಾಪುರ ನಗರ, ಶಶೀಧರ ಬಸಣ್ಣ ಪತ್ತಾರ ಸಿಂದಗಿ ಮತಕ್ಷೇತ್ರಗಳ ಅಭ್ಯರ್ಥಿಗಳೆಂದು ನಿರ್ಣಯಿಸಲಾಗಿದೆ.ಸೇಡಂ ಮತಕ್ಷೇತ್ರದಲ್ಲಿ ಶ್ರೀನಿವಾಸ ಕಾಸೋಜ ವಿಶ್ವಕರ್ಮ ಮತ್ತು ಮೋನಪ್ಪ ಪೋದ್ದಾರ, ಗುರುಮಟಕಲ್ ಮತಕ್ಷೇತ್ರದಲ್ಲಿ ಕೃಷ್ಣಾ ಭೀಮರಾವ ಬಡಿಗೇರ ಹಾಗೂ ರಾಮಚಂದ್ರ ಗರಕಪಳ್ಳಿ ಹೆಸರುಗಳಿವೆ. ಇವರಲ್ಲಿ ಯಾರಾದರೊಬ್ಬರನ್ನು ಆಯ್ಕೆಮಾಡಿ ಕಣಕ್ಕಿಳಿಸುವುದಾಗಿ ತಿಳಿಸಿದರು.ಯಾದಗಿರಿ ಜಿಲ್ಲಾ ವಿಶ್ವಕರ್ಮ ಸಮಾಜ ಅಧ್ಯಕ್ಷ ಮೋನಪ್ಪ ಬಡಿಗೇರ, ಸುರಪುರ ತಾಲ್ಲೂಕು ಅಧ್ಯಕ್ಷ ಮಹೇಶ ಶಾರದಳ್ಳಿ, ಬಸವರಾಜ ವಿಶ್ವಕರ್ಮ, ವೆಂಕಟೇಶ ದೊರೆಪಲ್ಲಿ, ಲಕ್ಷ್ಮೀಕಾಂತ ಸೀತನೂರ ಮತ್ತಿತರರು ಇದ್ದರು.

ಪ್ರತಿಕ್ರಿಯಿಸಿ (+)