ಸೋಮವಾರ, ಮೇ 17, 2021
30 °C

ವಿಶ್ವಕರ್ಮ ವಿದ್ಯಾರ್ಥಿನಿಲಯಕ್ಕೆ ಭೂಮಿ: ಶೀಘ್ರ ನಿರ್ಧಾರ- ಅಶೋಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ನಗರದಲ್ಲಿ ವಿಶ್ವಕರ್ಮ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಒಂದು ಎಕರೆ ಭೂಮಿ ನೀಡಬೇಕು ಎಂಬ ಜನಾಂಗದವರ ಬೇಡಿಕೆ ಕುರಿತು ಶೀಘ್ರದಲ್ಲೇ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ, ನಿರ್ಧಾರ ಕೈಗೊಳ್ಳಲಾಗುವುದು~ ಎಂದು ಸಚಿವ ಆರ್.ಅಶೋಕ ಭರವಸೆ ನೀಡಿದರು.ರಾಜ್ಯ ವಿಶ್ವಕರ್ಮ ಮಹಾಮಂಡಲವು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವಕರ್ಮ ದಿನಾಚರಣೆ ಮತ್ತು ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಯಾವುದೇ ಜನಾಂಗವು ಕೇವಲ ಸರ್ಕಾರದ ಸವಲತ್ತಿನಿಂದ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಸಂಘಟನಾ ಶಕ್ತಿ ಮಾತ್ರ ಸಾಮಾಜಿಕ ಮತ್ತುಆರ್ಥಿಕ ಸದೃಢತೆಯನ್ನು ನೀಡುತ್ತದೆ~ ಎಂದು ಅಭಿಪ್ರಾಯಪಟ್ಟರು.`ಸಮುದಾಯವು ರಾಜಕೀಯ ಸ್ಥಾನಮಾನವನ್ನು ನಿರೀಕ್ಷಿಸುುದು ಸಹಜ. ಆದರೆ ಜನಾಂಗದ ಯುವಜನತೆ ಐಎಎಸ್ ಮತ್ತು ಐಪಿಎಸ್‌ನಂತಹ ಹುದ್ದೆಗಳಿಗೇರುವಂತೆ ಮಾಡಲು ಪ್ರೋತ್ಸಾಹ ನೀಡಬೇಕು. ಆ ಮೂಲಕ ಜನಾಂಗದ ಅಭಿವೃದ್ಧಿಗೆ ಮುಂದಾಗಬೇಕು~ ಎಂದು ಕರೆ ನೀಡಿದರು.`ಜಾತಿ ಮತ್ತು ಧರ್ಮಕ್ಕೆ ಪರಂಪರೆಯಿದೆ. ಇಂತಹ ಸಮಾವೇಶಗಳು ಜನಾಂಗದ ಸಮಸ್ಯೆಗಳ ಕುರಿತು ಚರ್ಚಿಸುವ ವೇದಿಕೆಯಾಗಬೇಕು. ಮಠ ಮತ್ತು ಮಂದಿರಗಳಿಗೆ ಅನುದಾನ ನೀಡುತ್ತಿರುವ ಬಗ್ಗೆ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಮಠಗಳಿಗೆ ಹಣ ನೀಡಿದರೆ ಅದು ಸಾರ್ವಜನಿಕರ ಉಪಯೋಗಕ್ಕೆ ಬಳಕೆಯಾಗುತ್ತದೆ~ ಎಂದು ಹೇಳಿದರು.ಅರೆಮಾದನಹಳ್ಳಿ ಮಠದ ಗುರುಶಿವಸುಜ್ಞಾನಮೂರ್ತಿ ಸ್ವಾಮೀಜಿ, `ಅಮರಶಿಲ್ಪಿ ಜಕಣಾಚಾರಿ ಅವರು ನಿರ್ಮಿಸಿರುವ ಬೇಲೂರು ಮತ್ತು ಹಳೆಬೀಡು ಶಿಲ್ಪಗಳು ಇಂದಿಗೂ ಪ್ರಸಿದ್ಧ. ಅವರ ಸಮಾಧಿಯು ತುಮಕೂರಿನ ಕೈದಾಳ ಗ್ರಾಮದಲ್ಲಿದ್ದು, ಇದನ್ನು ಜೀರ್ಣೋದ್ಧಾರ ಮಾಡಲು ಸರ್ಕಾರ ನೆರವಾಗಬೇಕು~ ಎಂದು ಕೋರಿದರು.

 

`ಅಧಿಕಾರವನ್ನು ಎಂದಿಗೂ ಬಯಸದೇ ಕಾಯಕ ಯೋಗಿಗಳಂತೆ ಬದುಕಿದ ಜನಾಂಗದ ಪ್ರತಿನಿಧಿಗಳಿಗೆ ಸರ್ಕಾರದ ನಿಗಮ ಮತ್ತು ಮಂಡಳಿಗಳಲ್ಲಿ ಪ್ರಾತಿನಿಧ್ಯ ನೀಡಬೇಕು~ ಎಂದು ಒತ್ತಾಯಿಸಿದರು.ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಸಿ.ಮಂಜುಳಾ, ಪತ್ರಕರ್ತರಾದ ವೈ.ಜಿ.ಅಶೋಕ್‌ಕುಮಾರ್, ಕೆ.ಎಸ್.ಜನಾರ್ದನಾಚಾರಿ ಸೇರಿದಂತೆ ಹಲವು ಸಾಧಕರಿಗೆ `ವಿಶ್ವಕರ್ಮ ರತ್ನ ಪ್ರಶಸ್ತಿ~ ಪ್ರದಾನ ಮಾಡಲಾಯಿತು. ದೀಪಾಂಬುಧಿ ಕಾಳಿಕಾದೇವಿ ದೇವಾಲಯದ ಪೀಠಾಧ್ಯಕ್ಷ ಕರುಣಾಕರ ಸ್ವಾಮೀಜಿ, ಪಾಲಿಕೆ ಸದಸ್ಯೆ ಸುಗುಣ ಬಾಲಕೃಷ್ಣ ಇತರರು ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.