ಸೋಮವಾರ, ಜೂನ್ 21, 2021
20 °C

ವಿಶ್ವಕರ್ಮ ಸಮಾಜ ಕಡೆಗಣನೆ: ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆ.ಆರ್. ನಗರ: ‘ಬಡವರು ಮತ್ತು ಅಲ್ಪಸಂಖ್ಯಾತ ಸಮಾಜಗಳನ್ನು ಸರ್ಕಾರವೇ ಗುರುತಿಸಿ ಬಹುತೇಕ ಎಲ್ಲ ಸವಲತ್ತುಗಳನ್ನು ಆಗಾಗ ನೀಡುತ್ತಾ ಬರುತ್ತಿದೆ. ಇನ್ನೊಂದೆಡೆ, ಬಹು­ಸಂಖ್ಯಾತ ಸಮಾಜಗಳು ಹೋರಾಟದ ಮೂಲಕ ಸೌಲಭ್ಯ ಪಡೆಯಲು ಯಶಸ್ವಿ­ಯಾಗುತ್ತಿವೆ. ಆದರೆ, ವಿಶ್ವಕರ್ಮ ಸಮಾಜಕ್ಕೆ ಧ್ವನಿಯೂ ಇಲ್ಲ, ಹೋರಾಟದ ಶಕ್ತಿಯೂ ಇಲ್ಲ. ಇದರಿಂದ ಸಮಾಜಕ್ಕೆ ಸರ್ಕಾರದ ಸವಲತ್ತುಗಳು ಮರಿಚಿಕೆಯಾಗಿಯೇ ಉಳಿದಿವೆ’ ಎಂದು ಅರೆಮಾದನಹಳ್ಳಿ ಮಠದ ಶಿವಸುಜ್ಞಾನತೀರ್ಥ ಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.ಪಟ್ಟಣದ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಕಚೇರಿ­ಯಲ್ಲಿ ಭಾನುವಾರ ವಿಶ್ವಕರ್ಮ ಸರ್ಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘ ಉದ್ಘಾಟಿಸಿ ಅವರು ಮಾತನಾಡಿ­ದರು. ವಿಶ್ವಕರ್ಮ ಸಮಾಜ ಪ್ರಾಚೀನ­ವಾದದ್ದು. ನಮ್ಮ ದೇಶಕ್ಕೆ ರೈತನೇ ಬೆನ್ನೆಲೆಬು ಎಂದು ಹೇಳಲಾಗುತ್ತಿದೆ. ಆದರೆ, ಅದೇ ರೈತನಿಗೆ ವಿಶ್ವಕರ್ಮ ಸಮಾಜ ಬೆನ್ನೆಲುಬಾಗಿ ನಿಂತಿರುವುದು ಯಾರೂ ಮರೆಯುಂತಿಲ್ಲ. ವಿಶ್ವಕರ್ಮ ಸಮಾಜ ಐದು ವೃತ್ತಿಗಳನ್ನು ಅಳವಡಿಸಿ­ಕೊಂಡು ಇಡೀ ಭಾರತೀಯ ಸಂಸ್ಕೃತಿ ಎತ್ತಿ ಹಿಡಿದಿದೆ. ವಿಶ್ವಕರ್ಮ ಭಾರತ­ದಲ್ಲಿನ ಪ್ರತಿ­ಯೊಂದು ಧಾರ್ಮಿಕ ಕೇಂದ್ರಗಳಿಗೆ ಶಿಲ್ಪಕಲೆ­­ಗಳನ್ನು ಒದಗಿಸಿದ ಏಕೈಕ ಸಮಾಜ­ವಾಗಿದೆ. ಭಾರತಕ್ಕೆ ಸಂಸ್ಕೃತಿ­ಯನ್ನು ನೀಡಿದ, ರೈತನ ಬೆನ್ನೆಲುಬಾಗಿ ನಿಂತಿರುವ ವಿಶ್ವಕರ್ಮ ಸಮಾಜವನ್ನು ಸರ್ಕಾರಗಳು ಕಡೆಗಣಿಸಿವೆ. ಅಂತಹ ಒಂದು ಸಮಾಜ ಇಂದು ತನ್ನ ಕಾಲುಗಳ ಮೇಲೆ ತಾನು ನಿಂತುಕೊಳ್ಳಲು ಸಾಧ್ಯವಾಗದ ಸ್ಥಿತಿ­ಯಲ್ಲಿದೆ ಎಂದು ವಿಷಾದ ವ್ಯಕ್ತಪಡಿಸಿದರು.ಅಮರ ಶಿಲ್ಪಿ ಜಕಣಾಚಾರ್ಯರ ಹೆಸರು ಬಿಟ್ಟು ಸಂಶೋಧನೆಗಳು ಮಾಡಲು ಸಾಧ್ಯವಿಲ್ಲ ಎಂದಾಗ ಜಕಣಾಚಾರ್ಯರರು ಕಾಲ್ಪನಿಕ ವ್ಯಕ್ತಿ ಹೇಗಾಗುತ್ತಾರೆ ಎಂದ ಅವರು, ಇಂತಹ ಹೇಳಿಕೆಗಳು ಬಂದಾಗ ಸಂಘಸಂಸ್ಥೆಗಳು ಪ್ರತಿಭಟಿಸಬೇಕಾಗುತ್ತದೆ ಎಂದರು.ಸಂಘದ ಅಧ್ಯಕ್ಷ  ಬಿ.ಎಸ್. ಕಾಂತಾಚಾರ್, ಪ್ರೊ.ಡಾ.ಕೆಂಪಾಚಾರ್, ಸಾರ್ವಜನಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಮಂಟೇಲಿಂಗಾಚಾರ್, ಪುರಸಭೆ ಸದಸ್ಯ ಕೆ.ಬಿ. ಸುಬ್ರಹ್ಮಣ್ಯ, ವಿಶ್ವಕರ್ಮ ಸೇವಾ ಸಮಿತಿ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಎಸ್. ರೇವಣ್ಣ, ನಿವೃತ್ತ ತಹಶೀಲ್ದಾರ್ ಸ್ವಾಮಿ, ಸಾಲಿಗ್ರಾಮ ಎಸ್ಐ ಮಹೇಶ್,  ಅರ್ಕೇಶ್, ಗೌರವಾಧ್ಯಕ್ಷ ಹಲಗಾಚಾರ್, ದೊಡ್ಡ­ವೀರಾಚಾರ್, ನಟಶೇಖರಾಚಾರ್, ಚಂದ್ರಾಚಾರ್, ಮಂಜುಳಾ, ಸುಬ್ರಹ್ಮಣ್ಯ, ಮಂಜಾಚಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಟಿ. ಜವರೇಗೌಡ, ಸರ್ಕಾರಿ ನೌಕರರ ಸಂಘದ ನಟೇಶ್, ಭಾಸ್ಕರ್, ಮಂಜುನಾಥ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.