ವಿಶ್ವದ ಅತಿ ಸಣ್ಣ ಕಂಪ್ಯೂಟರ್ ಸೃಷ್ಟಿ

7

ವಿಶ್ವದ ಅತಿ ಸಣ್ಣ ಕಂಪ್ಯೂಟರ್ ಸೃಷ್ಟಿ

Published:
Updated:

ಲಂಡನ್ (ಪಿಐ):  ವಿಶ್ವದ ಅತಿ ಸಣ್ಣ ಕಂಪ್ಯೂಟರ್ ಅನ್ನು ಅಭಿವೃದ್ಧಿಪಡಿಸಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.

ಈ ಪುಟ್ಟ ಕಂಪ್ಯೂಟರ್‌ನ ಗಾತ್ರ     ಕೇವಲ ಒಂದು ಚದರ ಮಿ.ಮೀ.! ಈ ಕಂಪ್ಯೂಟರನ್ನು ವ್ಯಕ್ತಿಯೊಬ್ಬನ ಕಣ್ಣುಗುಡ್ಡೆಯೊಳಗೆ ಇಡಬಹುದು! ಮಿಚಿಗನ್ ವಿಶ್ವವಿದ್ಯಾಲಯದ ಅಧ್ಯಯನಕಾರರ ತಂಡವೊಂದು ಅಭಿವೃದ್ಧಿಪಡಿಸಿರುವ ಈ ಕಂಪ್ಯೂಟರ್‌ಗೆ  ಒತ್ತಡ ತಡೆಯುವ  ಪರದೆಯನ್ನು ಹೊಂದಿರುವ ಈ ಉಪಕರಣವನ್ನು  ಗ್ಲಾಕೋಮಕ್ಕೆ (ಕಣ್ಣು ಗುಡ್ಡೆಯಲ್ಲಿ ಒತ್ತಡ ಹೆಚ್ಚಾಗಿ ಕ್ರಮೇಣ ದೃಷ್ಟಿ ಕಳೆದುಕೊಳ್ಳುವ ರೋಗ ) ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಕಣ್ಣಿಗೆ ಅಳವಡಿಸಬಹುದು.‘ಈ ಕಂಪ್ಯೂಟರ್‌ನ ಗಾತ್ರ ಕೇವಲ ಒಂದು ಚದರ ಮಿ.ಮೀ ಆಗಿರಬಹುದು, ಆದರೆ ಅತ್ಯಂತ ಸಮರ್ಥವಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಇದಕ್ಕಿದೆ. ಅತ್ಯಾಧುನಿಕ ಕಡಿಮೆ ವಿದ್ಯುತ್ ಬಳಸುವ ಮೈಕ್ರೊ ಪ್ರೊಸೆಸರ್, ಒತ್ತಡವನ್ನು  ಗುರುತಿಸುವ, ತಡೆಯುವ ಸೆನ್ಸರ್, ಸ್ಮೃತಿಕೋಶ ಮತ್ತು ತೆಳುವಾದ ಪೊರೆಯಂತಹ ಬ್ಯಾಟರಿಯನ್ನು ಈ ಪುಟ್ಟ ಕಂಪ್ಯೂಟರ್ ಹೊಂದಿದೆ’ ಎಂದು ಡೈಲಿ ಮೇಲ್ ವರದಿ ಮಾಡಿದೆ. ‘ಅಲ್ಲದೇ ಒಂದು ಸೌರಕೋಶ ಮತ್ತು ಆಂಟೆನಾದೊಂದಿಗೆ ವಯರ್‌ಲೆಸ್ ರೇಡಿಯೊವನ್ನು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry