ವಿಶ್ವದ ಪ್ರಪ್ರಥಮ ವೈರ್ ಲೆಸ್ ರೇಡಿಯೋ: ಭಾರತೀಯ ಸಂಶೋಧಕರ ಸಾಧನೆ

7

ವಿಶ್ವದ ಪ್ರಪ್ರಥಮ ವೈರ್ ಲೆಸ್ ರೇಡಿಯೋ: ಭಾರತೀಯ ಸಂಶೋಧಕರ ಸಾಧನೆ

Published:
Updated:

ವಾಷಿಂಗ್ಟನ್ (ಐಎಎನ್ಎಸ್):ಭಾರತೀಯ ಮೂಲದ ಹಲವರನ್ನು ಒಳಗೊಂಡ ಸಂಶೋಧಕರ ತಂಡವೊಂದು ವಿಶ್ವದ ಮೊತ್ತ ಮೊದಲ ವೈರ್ ಲೆಸ್ ರೇಡಿಯೋವನ್ನು  ಅಭಿವೃದ್ಧಿ ಪಡಿಸಿದೆ. ಏಕ ಕಾಲಕ್ಕೆ ಪ್ರಮುಖ ಸಂದೇಶ ರವಾನಿಸುವ ವಿಶ್ವದ ಪ್ರಥಮ ರೇಡಿಯೋ. ಈ ರೇಡಿಯೋ ಮೂಲಕ ಏಕಕಾಲಕ್ಕೆ ಸಂದೇಶವನ್ನು ರವಾನಿಸುವುದರ ಜೊತೆಗೇ ಸಂದೇಶವನ್ನು ಆಲಿಸಬಹುದು.ಇದು ಹಾಲಿ ಸಂದೇಶ ರವಾನೆ ತಂತ್ರಜ್ಞಾನಕ್ಕೆ ದುಪ್ಪಟ್ಟು ವೇಗವನ್ನು ನೀಡಲಿದೆ.~ಪಠ್ಯ ಪುಸ್ತಕಗಳು ನೀವು ಇದನ್ನು ಮಾಡಲಾರಿರಿ ಎಂದು ಹೇಳುತ್ತವೆ~ ಎಂದು ಸ್ಟಾನ್ ಫೋರ್ಡ್ ವಿಶ್ವ ವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ಮತ್ತು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರೊಫೆಸರ್ ಫಿಲಿಪ್ ಲೆವಿಸ್ ಹೇಳಿದರು.~ಹೊಸ ವ್ಯವಸ್ಥೆಯು ವೈರ್ ಲೆಸ್ ಜಾಲಗಳನ್ನು ಹೇಗೆ ವಿನ್ಯಾಸಗೊಳಿಸಬಹುದೆಂಬ ನಮ್ಮ ಕಲ್ಪನೆಯನ್ನೇ ಸಂಪೂರ್ಣವಾಗಿ  ಪುನರ್ ರೂಪಿಸಬಲ್ಲುದು~ ಎಂಬುದಾಗಿ ಅವರು ಹೇಳಿದ್ದನ್ನು ಸ್ಟಾನ್ ಫೋರ್ಡ್ ಹೇಳಿಕೆ ಉಲ್ಲೇಖಿಸಿದೆ.ಸೆಲ್ ಫೋನ್ ಜಾಲಗಳು ಬಳಕೆದಾರರಿಗೆ ಏಕಕಾಲಕ್ಕೆ ಮಾತನಾಡಲು ಮತ್ತು ಆಲಿಸಲು ಅವಕಾಶ ಒದಗಿಸುತ್ತವೆ. ಆದರೆ ಇದು ಬಲು ತುಟ್ಟಿ. ಇದನ್ನು ಒದಗಿಸಲು ತುಂಬ ಎಚ್ಚರಿಕೆಯೊಂದಿಗೆ ಕಾರ್ಯ ನಿರ್ವಹಿಸಬೇಕಾಗುತ್ತದೆ ಮತ್ತು ವೈ-ಫೈ ಸೇರಿದಂತೆ ಇತರ ವೈರ್ ಲೆಸ್ ಜಾಲಗಳಿಗೂ ಯೋಗ್ಯವಾಗುವಂತೆ ನೋಡಬೇಕಾಗುತ್ತದೆ.ಈ ಹಿನ್ನೆಲೆಯಲ್ಲೇ ಜಂಗ್ 2 ಚೋಯಿ, ಮಯಾಂಕ್ ಮತ್ತು ಕಣ್ಣನ್ ಶ್ರೀನಿವಾಸನ್ ಈ ಮೂವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಪದವೀಧರರು  ಸರಳವಾದ ತಮ್ಮ ಕಲ್ಪನೆಯನ್ನು ಕೃತಿಗಿಳಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು.ಬಹುತೇಕ ವೈರ್ ಲೆಸ್ ಉಪಕರಣಗಳಲ್ಲಿ ಪ್ರತಿಯೊಂದು ಸಾಧನವನ್ನು ಏಕಕಾಲಕ್ಕೆ ಮಾತನಾಡಲು ಅಥವಾ ಕೇಳಲು ಮಾತ್ರವೇ ಬಳಸಬಹುದು. ~ಇದರಿಂದಾಗಿ ಸಂದೇಶ ರವಾನಿಸುವ ಇಬ್ಬರು ವ್ಯಕ್ತಿಗಳು ಏಕಕಾಲದಲ್ಲಿ ಪರಸ್ಪರ ಬೊಬ್ಬೆ ಹೊಡೆಯುವಂತೆ ಕಾಣುತ್ತದೆ~ ಎಂಬುದು ಲೆವಿಸ್ ಹೇಳಿಕೆ.ಇಬ್ಬರೂ ಏಕಕಾಲದಲ್ಲಿ ಬೊಬ್ಬೆ ಹೊಡೆದರೆ ಅವರಲ್ಲಿ ಒಬ್ಬರು ಇನ್ನೊಬ್ಬರ ಧ್ವನಿಯನ್ನು ಆಲಿಸಲು ಸಾಧ್ಯವಾಗುವುದಿಲ್ಲ~ ಎಂದು ಅವರು ನುಡಿದರು.ಈ ಹಿನ್ನಲೆಯಲ್ಲಿ ಕಾರ್ಯ ಆರಂಭಿಸಿದ ವಿದ್ಯಾರ್ಥಿಗಳ ತಂಡಕ್ಕೆ ಸಹಾಯಕ ಪ್ರೊಫೆಸರುಗಳಾದ ಲೆವಿಸ್ ಮತ್ತು ಸಚಿನ್ ಕಟ್ಟಿ ಅವರ ನೆರವಿನೊಂದಿಗೆ ಹೊಸ ರೇಡಿಯೋ ಅಭಿವೃದ್ಧಿ ಪಡಿಸಲು  ಹಲವು ತಿಂಗಳುಗಳೇ ಬೇಕಾದವು.ಈಗ ಈ ವಿದ್ಯಾರ್ಥಿಗಳ ತಂಡ ಹೊಸ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ತಾತ್ಕಾಲಿಕ ಪೇಟೆಂಟ್ ಪಡೆದುಕೊಂಡಿದ್ದು, ಅದರ ವಾಣಿಜ್ಯೀಕರಣ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry