ಶುಕ್ರವಾರ, ಜೂನ್ 25, 2021
29 °C

ವಿಶ್ವದ ಹಿರಿಯಜ್ಜಿಗೆ ಈಗ 116 ವರ್ಷ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಟೋಕಿಯೊ (ಎಎಫ್‌ಪಿ): ವಿಶ್ವದ ಅತಿ ಹಿರಿಯ ಮಹಿಳೆ ಎಂಬ ಖ್ಯಾತಿಯ  ಜಪಾನ್‌ನ ಮಿಸಾಕೊ ಒಕಾವ ಬುಧವಾರ ೧೧೬ನೇ ಹುಟ್ಟು­ಹಬ್ಬ ಆಚರಿಸಿಕೊಂಡಿದ್ದಾರೆ.ಮಿಸಾಕೊ ಪ್ರಸ್ತುತ ನರ್ಸಿಂಗ್‌ ಹೋಮ್‌ ಒಂದರಲ್ಲಿ ವಾಸಿ­ಸುತ್ತಿದ್ದು,  ಒಸಾಕದ ಮೇಯರ್ ಟಕೆಹಿರೊ ಒಗುರಾ ಅಲ್ಲಿಗೆ ಭೇಟಿ ನೀಡಿ ಅವರಿಗೆ ಶುಭಕೋರಿದರು. ಪೌಷ್ಟಿಕ ಆಹಾರ ಸೇವಿಸಿ ವಿಶ್ರಾಂತಿ ತೆಗೆದುಕೊಳ್ಳುತ್ತಿರುವುದೇ ಅವರ ದೀರ್ಘ ಆಯಸ್ಸಿನ ರಹಸ್ಯ ಎಂದು ಕುಟುಂಬ ಸದಸ್ಯರು ತಿಳಿಸಿದ್ದಾರೆ.ಮಿಸಾಕೊ 1898ರ ಮಾರ್ಚ್‌ 5ರಂದು ಜನಿಸಿದ್ದು, ೧೯೧೯ರಲ್ಲಿ ಮದುವೆಯಾಗಿದ್ದರು. ಜಗತ್ತಿನ ಈ ಅತಿ ವೃದ್ಧ ಮಹಿ­ಳೆಗೆ ಮೂರು ಮಕ್ಕಳು, ನಾಲ್ಕು ಮೊಮ್ಮಕ್ಕಳು ಮತ್ತು ಆರು ಮರಿಮಕ್ಕಳು. ಗಿನ್ನೆಸ್ ವಿಶ್ವದಾಖಲೆ ಸಂಸ್ಥೆ ಕಳೆದ ವರ್ಷ ಅವರಿಗೆ ಅತಿ ದೀರ್ಘಕಾಲ ಬದುಕಿರುವ ಮಹಿಳೆ ಎಂದು  ಪ್ರಮಾಣಪತ್ರ ನೀಡಿತ್ತು. ದೀರ್ಘ ಆಯಸ್ಸಿಗೆ ಪ್ರಸಿದ್ಧವಾಗಿರುವ ಜಪಾನಿನ 12.8 ಕೋಟಿ ಜನರಲ್ಲಿ ಕಾಲುಭಾಗ 65 ವರ್ಷ ಮೀರಿದವರದು. 2013ರ ಜೂನಿನಲ್ಲಿ 116 ವರ್ಷ ಪೂರೈಸಿ ಮೃತರಾದ ಜಪಾನ್‌ನ ಜಿರೊಮನ್ ಕಿಮುರ ಎಂಬು­ವರು ಜಗತ್ತಿನ ಅತಿ ವಯಸ್ಸಾದ ಪುರುಷ ಎಂದು ಪರಿಗಣಿತರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.