ವಿಶ್ವದ ಹಿರಿಯ ಮಹಿಳೆ ಸಾವು

7

ವಿಶ್ವದ ಹಿರಿಯ ಮಹಿಳೆ ಸಾವು

Published:
Updated:

ಲಂಡನ್(ಐಎಎನ್‌ಎಸ್): ಜಾರ್ಜಿಯಾದ 132 ವರ್ಷದ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಆಕೆ ವಿಶ್ವದ ಅತ್ಯಂತ ಹಿರಿಯ ಮಹಿಳೆ ಎನ್ನಲಾಗಿದೆ. ಅಂತಿಸಾ ಕವಿಚ್ವಾ 1880ರ ಜುಲೈ 8ರಂದು ಜನಿಸಿದ್ದಳು ಎನ್ನಲಾಗಿದೆ. ಆದರೆ, ಈಕೆಯ ವಯಸ್ಸಿನ ಬಗ್ಗೆ ಯಾವುದೇ ಅಧಿಕೃತ ದಾಖಲಾತಿ ಇಲ್ಲ.ಇವಳಿಗೆ 12 ಮೊಮ್ಮಕ್ಕಳು, 18 ಮರಿ ಮೊಮ್ಮಕ್ಕಳು, 4 ಮರಿ ಮೊಮ್ಮಕ್ಕಳ ಮಕ್ಕಳು ಇದ್ದಾರೆ. ಈ ಮಹಿಳೆಯ ಆರೋಗ್ಯ ಚೆನ್ನಾಗಿತ್ತು. ನಿತ್ಯ ಸ್ಥಳೀಯ ಬ್ರಾಂದಿ ಕುಡಿಯುವ ಅಭ್ಯಾಸ ಈಕೆಗೆ ಇತ್ತು ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry