ವಿಶ್ವಬ್ಯಾಂಕ್‌ಗೆ ಎಲ್.ಕೆ. ಅತೀಕ್ ನೇಮಕ

7

ವಿಶ್ವಬ್ಯಾಂಕ್‌ಗೆ ಎಲ್.ಕೆ. ಅತೀಕ್ ನೇಮಕ

Published:
Updated:

ಬೆಂಗಳೂರು: ವಿಶ್ವಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರ ಹಿರಿಯ ಸಲಹೆಗಾರರಾಗಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಎಲ್.ಕೆ.ಅತೀಕ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ.ಅತೀಕ್ ಅವರು ಐದು ವರ್ಷದಿಂದ ದೆಹಲಿಯಲ್ಲಿ ಪ್ರಧಾನಿ ಕಚೇರಿಯ ಜಂಟಿ ಕಾರ್ಯದರ್ಶಿಯಾಗಿದ್ದಾರೆ. ಮುಂದಿನ ಮೂರು ವರ್ಷಗಳ ಅವಧಿಗೆ ವಿಶ್ವಬ್ಯಾಂಕಿಗೆ ನಿಯೋಜನೆಗೊಂಡಿದ್ದಾರೆ. ಮುಂದಿನ ವಾರ ಅವರು ಅಮೆರಿಕಕ್ಕೆ ತೆರಳುವರು.ವಿಶ್ವಬ್ಯಾಂಕಿನಲ್ಲಿ ವಿವಿಧ ದೇಶಗಳನ್ನು ಪ್ರತಿನಿಧಿಸುವ 35 ಕಾರ್ಯನಿರ್ವಾಹಕ ನಿರ್ದೇಶಕರಿದ್ದಾರೆ. ಇವರು ಬ್ಯಾಂಕಿನ ಆಡಳಿತ ಮಂಡಳಿಯ ಸದಸ್ಯರು. ವಿವಿಧ ಯೋಜನೆಗಳಿಗೆ ಹಣಕಾಸಿನ ನೆರವು ಒದಗಿಸುವುದು ಸೇರಿದಂತೆ ಇತರ ಅನೇಕ ಅಂತರರಾಷ್ಟ್ರೀಯ ಹಣಕಾಸು ವಿಷಯಗಳಿಗೆ ಸಂಬಂಧಿಸಿದ ವಿಚಾರಗಳಲ್ಲಿ ಆಡಳಿತ ಮಂಡಳಿ ತೆಗೆದುಕೊಳ್ಳುವ ತೀರ್ಮಾನವೇ ಅಂತಿಮ.ವಿಶ್ವದ ಹಲವು ದೇಶಗಳನ್ನು ಸೇರಿಸಿ ಒಂದೊಂದು ಗುಂಪು ರಚಿಸಲಾಗಿದೆ. ಭಾರತ, ಭೂತಾನ್, ಶ್ರೀಲಂಕಾ ಮತ್ತು ಬಾಂಗ್ಲಾದೇಶಗಳು ಒಂದು ಗುಂಪಿನಲ್ಲಿವೆ. ಬಿಹಾರ ಮೂಲದ ನಿವೃತ್ತ ಐಎಎಸ್ ಅಧಿಕಾರಿ ಎಂ.ಎನ್. ಪ್ರಸಾದ್ ಅವರು ವಿಶ್ವಬ್ಯಾಂಕಿನಲ್ಲಿ ಈ ಗುಂಪಿಗೆ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.ಈ ರೀತಿಯ ಪ್ರತಿಯೊಬ್ಬ ಕಾರ್ಯನಿರ್ವಾಹಕ ನಿರ್ದೇೀಶಕರಿಗೂ ಇಬ್ಬರು ಹಿರಿಯ ಸಲಹೆಗಾರರು ಮತ್ತು ಇಬ್ಬರು ಸಲಹೆಗಾರರು ಇರುತ್ತಾರೆ. ಈ ತಂಡಕ್ಕೆ ಹಿರಿಯ ಸಲಹೆಗಾರರಾಗಿ ಅತೀಕ್ ನೇಮಕಗೊಂಡ್ದ್ದಿದಾರೆ.  ಮಹತ್ವದ ಈ ಹುದ್ದೆಗೆ ಆಯ್ಕೆಯಾದ ರಾಜ್ಯದ ಐಎಎಸ್ ಅಧಿಕಾರಿಗಳಲ್ಲಿ ಇವರು ಎರಡನೆಯವರು. ಈ ಹಿಂದೆ ಇದೇ ಹುದ್ದೆಗೆ ಕೆ.ಪಿ.ಕೃಷ್ಣನ್ ನೇಮಕಗೊಂಡಿದ್ದರು.  ಏನು ಕೆಲಸ?

 ದೇಶದ ವಿವಿಧ ಯೋಜನೆಗಳಿಗೆ ವಿಶ್ವಬ್ಯಾಂಕ್ ಅನುದಾನ ನೀಡುತ್ತಿದೆ. ಅದಕ್ಕಾಗಿ ಭಾರತ ಸರ್ಕಾರ ಮತ್ತು ವಿಶ್ವಬ್ಯಾಂಕ್ ನಡುವೆ ಸಮನ್ವಯ ಸಾಧಿಸುವುದು, ಹೆಚ್ಚು ಹೆಚ್ಚು ಹಣಕಾಸಿನ ನೆರವು ಪಡೆಯುವುದಕ್ಕೆ ಅಗತ್ಯ ಇರುವ ಸಮಾಲೋಚನೆಗಳನ್ನು ವಿಶ್ವಬ್ಯಾಂಕ್ ಜತೆ ನಡೆಸುವುದು ಅತೀಕ್ ಅವರ ಬಹುಮುಖ್ಯ ಕೆಲಸ. ವಿಶ್ವಬ್ಯಾಂಕ್‌ನ ಆಡಳಿತ ಮಂಡಳಿಯ ಸಭೆಗಳಲ್ಲಿ ಭಾಗವಹಿಸುವ ಅವಕಾಶ ಕೂಡ ಇದೆ. ತಮ್ಮ ಗುಂಪಿನ ರಾಷ್ಟ್ರಗಳ ಹಿತಾಸಕ್ತಿ ರಕ್ಷಣೆಯ ಜವಾಬ್ದಾರಿ ಕೂಡ ಇವರ ಮೇಲಿದೆ ಎನ್ನಲಾಗಿದೆ.ಹರ್ಷ ತಂದಿದೆ

`ಇಷ್ಟು ದಿನ ಐಎಎಸ್ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ನನಗೆ ಇದೊಂದು ಹೊಸ ರೀತಿಯ ಕೆಲಸವಾಗಲಿದೆ. ಭಾರತ ಸೇರಿದಂತೆ ನೆರೆ ರಾಷ್ಟ್ರಗಳ ಹಿರತಕ್ಷಣೆ ಸಲುವಾಗಿ ವಿಶ್ವಬ್ಯಾಂಕ್‌ನಲ್ಲಿ ಕಾರ್ಯ ನಿರ್ವಹಿಸುವುದು ನಿಜಕ್ಕೂ ಸಂತಸದ ಸಂಗತಿ~ ಎಂದು ಅವರು `ಪ್ರಜಾವಾಣಿ~ ಜತೆ ಹರ್ಷ ಹಂಚಿಕೊಂಡರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry