ಬುಧವಾರ, ಜನವರಿ 22, 2020
28 °C

ವಿಶ್ವರಾಧ್ಯರು ಕೃಷಿ ಯೋಗಿ: ಗುತ್ತೇದಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಫಜಲಪುರ: ‘ಇಲ್ಲಿನ ಸಂಸ್ಥಾನ ಹಿರೇಮಠದ ಪೀಠಾಧಿಪತಿ ಜನರಿಗೆ ಸಂಸ್ಕಾರ ಮತ್ತು ಶಿಕ್ಷಣ ಸಂಸ್ಥೆ ನೀಡು­ವುದರ ಜೊತೆಯಲ್ಲಿ, ಹೆಚ್ಚಿನ ಸಮಯ ಕೃಷಿ ಚಟುವಟಿಕೆಗಳಲ್ಲಿ ತೊಡಗಿ­ಕೊಂಡು ಕೃಷಿ ಕಾಯಕಯೋಗಿ ಆಗಿ­ದ್ದಾರೆ’ ಎಂದು ಶಾಸಕ ಮಾಲೀಕಯ್ಯ ಗುತ್ತೇದಾರ ತಿಳಿಸಿದರು.ಸಂಸ್ಥಾನ ಹಿರೇಮಠದಲ್ಲಿ 4 ಎಕರೆ­ಯಲ್ಲಿ ಬೆಳೆದಿರುವ ದ್ರಾಕ್ಷಿ ಬೆಳೆಯನ್ನು ಬುಧವಾರ ವೀಕ್ಷಿಸಿದ ನಂತರ ಮಾತನಾಡಿದ ಅವರು, ‘ವಿಶ್ವರಾಧ್ಯ ಮಳೇಂದ್ರ ಶಿವಾಚಾರ್ಯರು ಕೃಷಿ­ಯಲ್ಲಿ ಹೆಚ್ಚು ಸಾಧನೆ ಮಾಡಿದ್ದಾರೆ. ಇವರು ಮಾಡುತ್ತಿರುವ ಕೃಷಿ ಇತರರಿಗೆ ಮಾದರಿಯಾಗಿದೆ’ ಎಂದರು.ಬಸವಣ್ಣಪ್ಪ ಪಾಟೀಲ ಅಂಕಲಗಿ, ಶಾಂತಯ್ಯ ಹಿರೇಮಠ, ಸಿದ್ದು ಹಳೆ­ಗೋಧಿ, ತಾಲ್ಲೂಕು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ವಿಶ್ವನಾಥ ರೇವೂರ, ಸಿದ್ದು ದಿಕ್ಸಂಗಿ, ಮಹಾಂತೇಶ ಪಾಟೀಲ, ಮಣೂರ ಗ್ರಾ.ಪಂ ಅಧ್ಯಕ್ಷ ರಮೇಶ ಬಾಕೆ ಮತ್ತಿತರು ಇದ್ದರು.

ಪ್ರತಿಕ್ರಿಯಿಸಿ (+)