ಶುಕ್ರವಾರ, ನವೆಂಬರ್ 15, 2019
26 °C
ಭಾರತದಲ್ಲಿ ಬಡತನ ತಗ್ಗಿಸಲು ನೆರವು

ವಿಶ್ವಸಂಸ್ಥೆಯಿಂದ ಸಾಲ ಯೋಜನೆ ಪ್ರಸ್ತಾವ

Published:
Updated:

ವಾಷಿಂಗ್ಟನ್ (ಪಿಟಿಐ):  ಭಾರತದ ಕಡಿಮೆ ಆದಾಯವಿರುವ ಏಳು ರಾಜ್ಯಗಳಲ್ಲಿನ ಬಡತನದ ಪ್ರಮಾಣ ತಗ್ಗಿಸಲು ಬೃಹತ್ ಸಾಲ ನೆರವಿನ ಯೋಜನೆ ಪ್ರಸ್ತಾವವನ್ನು ವಿಶ್ವಬ್ಯಾಂಕ್ ಸಿದ್ಧಪಡಿಸಿದೆ.ಈ ಮೂಲಕ 2010ರಲ್ಲಿ 29.8ರಷ್ಟಿದ್ದ ಬಡತನದ ಪ್ರಮಾಣವನ್ನು 2030ರ ವೇಳೆಗೆ 5.5ರಷ್ಟು ತಗ್ಗಿಸುವ ಗುರಿಯನ್ನು ಈ ಪ್ರಸ್ತಾವ ಹೊಂದಿದೆ. ಬಿಹಾರ, ಛತ್ತೀಸ್‌ಗಡ, ಜಾರ್ಖಂಡ್, ಮಧ್ಯಪ್ರದೇಶ, ಒಡಿಶಾ, ರಾಜಸ್ತಾನ ಹಾಗೂ ಉತ್ತರಪ್ರದೇಶ ಇವು ಪ್ರಸ್ತಾವದಲ್ಲಿ ಸೇರಿರುವ ಏಳು ರಾಜ್ಯಗಳು.ಈ ಪ್ರಸ್ತಾವ ಅನುಮೋದನೆಗೊಂಡರೆ ವಿಶ್ವಬ್ಯಾಂಕ್ ನಾಲ್ಕು ವರ್ಷದ ಅವಧಿವರೆಗೆ ಪ್ರತಿವರ್ಷರೂ. 16,500 ಕೋಟಿಯಿಂದರೂ. 27,500 ಕೋಟಿ (ಮುನ್ನೂರು ಕೋಟಿಯಿಂದ ಐನೂರು ಕೋಟಿ ಡಾಲರ್) ಸಾಲ ನೆರವನ್ನು ಈ ರಾಜ್ಯಗಳಿಗಾಗಿ ನೀಡಲಿದೆ.ಸಾಲ ಮೊತ್ತದ ಶೇ 60ರಷ್ಟು ಹಣವನ್ನು ರಾಜ್ಯ ಸರ್ಕಾರಗಳ ಯೋಜನೆಗಳಿಗಾಗಿ ಮೀಸಲಿಡಬೇಕಾಗುತ್ತದೆ.`ಭಾರತದ ಬಡತನ ರೇಖೆಗಿಂತ ಕೆಳಗಿರುವವರಲ್ಲಿ ಶೇ 60ರಷ್ಟು ಈ ಏಳು ರಾಜ್ಯಗಳಲ್ಲಿ ನೆಲೆಸಿದ್ದು, ಈಗ ಇವುಗಳ ಬೆಳವಣಿಗೆ ಪ್ರಮಾಣ ಸರಾಸರಿಗಿಂತ ಅಧಿಕವಿದೆ. ಹೀಗಾಗಿ, ಈ ರಾಜ್ಯಗಳಿಗೆ ನೀಡುವ ನೆರವು ಹೆಚ್ಚು ಫಲಪ್ರದವಾಗುತ್ತದೆ' ಎಂದು ವಿಶ್ವಬ್ಯಾಂಕ್‌ನ ಭಾರತದ ನಿರ್ದೇಶಕ ಒನ್ನೋ ರ‌್ಹುಲ್ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿಕ್ರಿಯಿಸಿ (+)