ವಿಶ್ವಸಂಸ್ಥೆ ಕೈಸೇರಿದ ಸಿರಿಯಾ ಪತ್ರ

7
ರಾಸಾಯನಿಕ ಅಸ್ತ್ರಗಳ ನಿರ್ಬಂಧಕ್ಕೆ ಸಮ್ಮತಿ

ವಿಶ್ವಸಂಸ್ಥೆ ಕೈಸೇರಿದ ಸಿರಿಯಾ ಪತ್ರ

Published:
Updated:

ವಿಶ್ವಸಂಸ್ಥೆ (ಪಿಟಿಐ): ರಾಸಾಯನಿಕ ಅಸ್ತ್ರಗಳ ತಯಾರಿಕೆ ಹಾಗೂ ಅವುಗಳ ಬಳಕೆಯ ಮೇಲೆ ನಿರ್ಬಂಧ ಹೇರಲು ಅವಕಾಶ ಕಲ್ಪಿಸುವ ‘ರಾಸಾಯ ನಿಕ ಅಸ್ತ್ರಗಳ ನಿಷೇಧ ಸಂಘಟನೆ’ಗೆ ಸೇರ್ಪಡೆಗೆ ಸಂಬಂಧಿಸಿ ಸಿರಿಯಾ ಸರ್ಕಾರದ  ಒಪ್ಪಂದದ ದಾಖಲೆ ಪತ್ರಗಳು ತನ್ನ ಕೈಸೇರಿವೆ ಎಂದು ವಿಶ್ವಸಂಸ್ಥೆ ತಿಳಿಸಿದೆ.‘ಈ ಸಂಬಂಧದ ಪತ್ರವೊಂದನ್ನು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಅವರು ಸಿರಿಯಾ ಸರ್ಕಾರದಿಂದ ಸ್ವೀಕರಿಸಿದ್ದು, ರಾಸಾಯನಿಕ ಅಸ್ತ್ರಗಳ ಬಳಕೆ ನಿಷೇಧದ ಪ್ರಸ್ತಾಪಕ್ಕೆ ಅಲ್ಲಿಯ ಅಧಕ್ಷರು ಸಹಿ ಹಾಕಿದ್ದಾರೆ’ ಎಂದು ವಿಶ್ವಸಂಸ್ಥೆ ಹೊರಡಿಸಿದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ರಾಸಾಯನಿಕ ಅಸ್ತ್ರಗಳ ಬಳಕೆ ಮೇಲೆ ವಿಧಿಸಲಾಗಿ ರುವ ನಿರ್ಬಂಧವನ್ನು ಪಾಲಿಸುವ ಕುರಿತು ಸಿರಿಯಾ ಅಧಿಕಾರಿಗಳು ಬದ್ಧತೆಯನ್ನೂ ಈ ಪತ್ರದಲ್ಲಿ ವ್ಯಕ್ತಪಡಿಸಿ ದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ.ಸಿರಿಯಾದ ಈ ಕ್ರಮವನ್ನು ಮೂನ್ ಸ್ವಾಗತಿಸಿದ್ದು, ಈ ಸಂಬಂಧ ಜಿನಿವಾದಲ್ಲಿ ನಡೆಯುತ್ತಿರುವ ಮಾತುಕತೆ ಶೀಘ್ರ ಒಪ್ಪಂದವೊಂದಕ್ಕೆ ಬರಲು ನೆರವಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದರು.

ಸಿರಿಯಾ ಕ್ರಮಕ್ಕೆ ರಷ್ಯಾ ಶ್ಲಾಘನೆ

ಬಿಷ್ಕೇಕ್‌ (ಕಿರ್ಗಿಸ್ತಾನ) (ಎಪಿ): ತ
ನ್ನಲ್ಲಿರುವ ರಾಸಾಯನಿಕ ಅಸ್ತ್ರಗಳನ್ನು ಅಂತರರಾಷ್ಟ್ರೀಯ ಸಮುದಾಯದ ನಿಯಂತ್ರಣಕ್ಕೆ ಒಪ್ಪಿಸುವ ಸಿರಿಯಾ ನಿರ್ಧಾರವನ್ನು ಮಿತ್ರರಾಷ್ಟ್ರ ರಷ್ಯಾ ಸ್ವಾಗತಿಸಿದೆ.ಅಂತರರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ರಷ್ಯಾ ಹಾಗೂ ಚೀನಾ ಸಹಯೋಗದಲ್ಲಿ ಇಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌, ಸಿರಿಯಾ ವಿರುದ್ಧ ಸೇನಾ ದಾಳಿ ನಡೆಸುವ ಅಮೆರಿಕ ಯತ್ನಕ್ಕೆ ಈ ಮೂಲಕ ಎಚ್ಚರಿಕೆ ನೀಡಿದಂತಾಗುವುದಲ್ಲದೆ ಬಿಕ್ಕಟ್ಟು ಪರಿಹಾರಕ್ಕೆ ಇಂತಹ ಕ್ರಮ ಪರಿಣಾಮಕಾರಿ ಪರಿಹಾರ ಎನಿಸುತ್ತದೆ ಎಂದರು.ರಾಸಾಯನಿಕ ಅಸ್ತ್ರಗಳ ನಿಷೇಧ ಸಂಘಟನೆ (ಒಪಿಸಿಡಬ್ಯ್ಲೂ) ಗೆ ಸಿರಿಯಾ ಸದಸ್ಯ ರಾಷ್ಟ್ರವಾಗಬೇಕು  ಎನ್ನುವ ಪ್ರಸ್ತಾವವನ್ನು ರಷ್ಯಾ ಮುಂದಿಟ್ಟಿತ್ತು. ಸಿರಿಯಾ ಗುರುವಾರ ಔಪಚಾರಿಕವಾಗಿ ಇದನ್ನು ಒಪ್ಪಿಕೊಂಡಿದ್ದು, ಇದರ ಜಾರಿಗೆ ಮೂವತ್ತು ದಿನಗಳ ಕಾಲಾವಕಾಶ ವನ್ನು ಕೇಳಿದೆ. ಸಿರಿಯಾದ ನಿರ್ಧಾರ ವನ್ನು ಅಮೆರಿಕ ಸ್ವಾಗತಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry