ಗುರುವಾರ , ಫೆಬ್ರವರಿ 25, 2021
26 °C

ವಿಶ್ವಸಂಸ್ಥೆ ತರಬೇತಿ ವಿಭಾಗಕ್ಕೆ ಭಾರತದ ಸೇಥ್‌ ನೇಮಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವಸಂಸ್ಥೆ ತರಬೇತಿ ವಿಭಾಗಕ್ಕೆ ಭಾರತದ ಸೇಥ್‌ ನೇಮಕ

ವಿಶ್ವಸಂಸ್ಥೆ (ಪಿಟಿಐ): ಭಾರತದ ಹಿರಿಯ ರಾಯಭಾರಿ ನಿಖಿಲ್‌ ಸೇಥ್‌ ಅವರನ್ನು ವಿಶ್ವಸಂಸ್ಥೆಯ ತರಬೇತಿ ಮತ್ತು ಸಂಶೋಧನಾ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ನೇಮಕ ಮಾಡಿದ್ದಾರೆ.ದೆಹಲಿ ವಿಶ್ವವಿದ್ಯಾಲಯದಿಂದ  ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ನಿಖಿಲ್ ಅವರು ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆಯ ಸುಸ್ಥಿರ ಅಭಿವೃದ್ಧಿ ವಿಭಾಗದ ನಿರ್ದೇಶಕರಾಗಿ ಈಗ ಕೆಲಸ ಮಾಡುತ್ತಿದ್ದಾರೆ.ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಸಮಾವೇಶ ನಡೆಸುವ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿಯವರ ಕಚೇರಿಯ ಮುಖ್ಯಸ್ಥರಾಗಿ ಅವರು ಸೇವೆ ಸಲ್ಲಿಸಿದ್ದರು. ಸುಸ್ಥಿರ ಅಭಿವೃದ್ಧಿಗೆ ಸಂಬಂಧಿಸಿ 2015ರ ನಂತರದ ಅಭಿವೃದ್ಧಿ ಕಾರ್ಯಸೂಚಿ ಸೇರಿದಂತೆ ಅನುಸರಣೆ ಕೆಲಸಗಳಿಗೆ ಅವರು ಬೆಂಬಲ ನೀಡಿದ್ದರು.ಸಣ್ಣ ದ್ವೀಪಗಳ ಅಭಿವೃದ್ಧಿಯ ಮೂರನೇ ಅಂತರರಾಷ್ಟ್ರೀಯ ಸಮಾವೇಶ ಏರ್ಪಡಿಸುವಲ್ಲಿಯೂ ಅವರು ಮುಖ್ಯ ಪಾತ್ರ  ವಹಿಸಿದ್ದರು. ವಿಶ್ವಸಂಸ್ಥೆಯ ತರಬೇತಿ ವಿಭಾಗವು ವರ್ಷಕ್ಕೆ 400ಕ್ಕೂ ಹೆಚ್ಚು ತರಬೇತಿ ಕಾರ್ಯಕ್ರಮಗಳ ಮೂಲಕ 25 ಸಾವಿರಕ್ಕೂ ಹೆಚ್ಚು ಜನರ ಸಾಮರ್ಥ್ಯ ವೃದ್ಧಿ ನಡೆಸುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.