ವಿಶ್ವಸಮರಕ್ಕೆ ಪಶ್ಚಿಮ ಸಜ್ಜು

ಗುರುವಾರ , ಜೂಲೈ 18, 2019
23 °C

ವಿಶ್ವಸಮರಕ್ಕೆ ಪಶ್ಚಿಮ ಸಜ್ಜು

Published:
Updated:

ವಿಶ್ವಸಮರಕ್ಕೆ ಪಶ್ಚಿಮ ಸಜ್ಜು

ಮಾಸ್ಕೊ, ಜುಲೈ 10 - ಹೊಸ ವಿಶ್ವ ಸಮರವೊಂದು ನಡೆಯಬಹುದಾದ ವಿಪತ್ತು ವಾಸ್ತವವಾಗಿಯೂ ಉಂಟಾಗಿದೆಯೆಂದೂ ಪಶ್ಚಿಮದ `ದಾಳಿಕಾರಕ ಶಕ್ತಿಗಳು~ ಸಮರಕ್ಕೆ ಸಿದ್ಧತೆ ನಡೆಸುತ್ತಿವೆಯೆಂದೂ ಸೋವಿಯತ್ ಪ್ರಧಾನ ಮಂತ್ರಿ ಖ್ರುಶ್ಚೋವ್‌ರವರು ಇಂದು ಇಲ್ಲಿ ತಿಳಿಸಿದರು.ಸೋಷಲಿಸ್ಟ್ ರಾಷ್ಟ್ರಗಳಿಂದ ವಿಪತ್ತು ಸಂಭವಿಸಲಿದೆಯೆನ್ನುವುದನ್ನು ನೆಪವಾಗಿಟ್ಟುಕೊಂಡು ಪಶ್ಚಿಮ ರಾಷ್ಟ್ರಗಳು ಸಮರ ಸಿದ್ಧತೆ ನಡೆಸುತ್ತಿದೆಯೆಂದೂ ಅವರು ಆಪಾದಿಸಿದರು. ಪ್ರತಿಯೊಂದು ರಾಷ್ಟ್ರದಲ್ಲಿನ ಮಾರಕ ಅಸ್ತ್ರಗಳ ದಾಸ್ತಾನು ಕಡಿಮೆಯಾಗದೆ ಒಂದೇ ಸಮನೆ ಅಧಿಕಗೊಳ್ಳುತ್ತಿದ್ದರೆ ಸಮರದ ವಿಪತ್ತು ಹೆಚ್ಚುತ್ತಾ ಹೋಗುವುದು.ಶನಿವಾರ ನಗರಕ್ಕೆ ನೆಹ್ರು


ಬೆಂಗಳೂರು, ಜುಲೈ 10 - ಪ್ರಧಾನಿ ನೆಹರೂ ಅವರು ಜುಲೈ 14 ರಂದು ಮಧ್ಯಾಹ್ನ 12 ಗಂಟೆಗೆ ವಿಮಾನದಲ್ಲಿ ನಗರಕ್ಕೆ ಆಗಮಿಸುವರು. ಅಂದೇ ಸಂಜೆ 5 ಗಂಟೆಗೆ ವಿಶ್ವೇಶ್ವರಯ್ಯ ಮೂಸಿಯಂನ ಉದ್ಘಾಟನೆಯನ್ನು ನೆರವೇರಿಸುವರು.15 ರಂದು ತುಮಕೂರಿಗೆ ಪ್ರಯಾಣ ಮಾಡುವರು. ಅಲ್ಲಿ ಹೈಸ್ಕೂಲ್ ಮೈದಾನದಲ್ಲಿ ಪಾಲಿಟೆಕ್ನಿಕ್‌ನ ಉದ್ಘಾಟನೆ ನಡೆಸುವರಲ್ಲದೆ, ಆರ್ಯನ್ ಹೈಸ್ಕೂಲಿನ ಶಂಕುಸ್ಥಾಪನೆಯನ್ನು ನೆರವೇರಿಸುವರು.ಹಿಂದೀ ಶಿಕ್ಷಣ ಮಾಧ್ಯಮ ಆಗಲಾರದು: ರಾಜಾಜಿ

ಮದ್ರಾಸ್, ಜುಲೈ 10 - ವಿಶ್ವವಿದ್ಯಾ ನಿಲಯಗಳಲ್ಲಿ ಇಂಗ್ಲೀಷ್ ದೇಶದ ಶಿಕ್ಷಣ ಮಾಧ್ಯಮವಾಗಿರುವುದನ್ನು ತ್ಯಜಿಸಿ, ಅದರ ಸ್ಥಾನದಲ್ಲಿ ನಾನಾ ಪ್ರಾದೇಶಿಕ ಭಾಷೆಗಳನ್ನು ಬಳಸಿದಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅಖಿಲ ಭಾರತದ ನಾಗರೀಕರಾಗಿರುವುದರ ಬದಲು 15 ದ್ವೀಪಗಳಲ್ಲಿ ಪ್ರತ್ಯೇಕ ಗೊಂಡಿರುವರೆಂದು ಶ್ರೀ ರಾಜಗೋಪಾಲಾಚಾರಿಯವರು `ಸ್ವರಾಜ್ಯ~ ಪತ್ರಿಕೆಯಲ್ಲಿ ಬರೆದಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry