ಬುಧವಾರ, ಜೂನ್ 16, 2021
23 °C

ವಿಶ್ವಾರಾಧ್ಯರು ಸರ್ವಶಕ್ತರು: ಬ್ಯಾಗವಾಡಮಠ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾದಗಿರಿ: ಅಬ್ಬೆತುಮಕೂರಿನ ವಿಶ್ವಾರಾಧ್ಯರು ಈ ನಾಡಿನ ಎಲ್ಲ ಜನತೆಯ ಆರಾಧ್ಯ ದೈವವಾಗಿದ್ದಾರೆ. ಭಕ್ತಿಯಿಂದ ಭಜಿಸಿದವರಿಗೆ ಬೇಡಿದ್ದನ್ನು ನೀಡುವ ಸರ್ವ ಶಕ್ತರಾಗಿದ್ದಾರೆ ಎಂದು ಡಿಎಸ್ಪಿ ಎಸ್.ಡಿ. ಬಾಗವಾಡಮಠ ಹೇಳಿದರು.ಬುಧವಾರ ರಾತ್ರಿ ತಾಲ್ಲೂಕಿನ ಅಬ್ಬೆತುಮಕೂರಿನಲ್ಲಿ ಜಾತ್ರಾ ಮಹೋತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ವಿಶ್ವಾರಾಧ್ಯರ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು.ಸಮಸ್ತ ಭಕ್ತ ಕುಲ ಕೋಟಿಯನ್ನು ಉದ್ದರಿಸುತ್ತಿರುವ ವಿಶ್ವಾರಾಧ್ಯರು, ನಾಡಿನ ಜನತೆಯ ಪ್ರತ್ಯಕ್ಷ ದೈವವಾಗಿದ್ದಾರೆ. ಆ ಪರಂಪರೆಯಲ್ಲಿ ಬಾಳುತ್ತಿರುವ ಈ ಭಾಗದ ಜನತೆ ಭಕ್ತಿ ಭಾವುಕರಾಗಿದ್ದಾರೆ ಅಂತೆಯೇ ಇಲ್ಲಿ ಶಾಂತಿ, ಸುವ್ಯವಸ್ಥೆ, ನೆಮ್ಮದಿ ಮನೆ ಮಾಡಿವೆ ಎಂದು ಹೇಳಿದರು.ಇಂತಹ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಭಾಗ್ಯ ತಮಗೆ ಒದಗಿರುವುದು ಶ್ರೀ ವಿಶ್ವಾರಾಧ್ಯರ ಕರುಣೆಯೆಂದೇ ಭಾವಿಸಿರುವುದಾಗಿ ತಿಳಿಸಿದರು.ಮುಖ್ಯ ಅತಿಥಿಗಳಾಗಿ ಡಯಟ್ ಪ್ರಾಂಶುಪಾಲ ಟಿ.ಜಿ. ಸಯೀದಾ ಮಾತನಾಡಿ, ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಭಾಗದಲ್ಲಿ ಗಂಗಾಧರ ಸ್ವಾಮೀಜಿ, ಅನೇಕ ಶಿಕ್ಷಣ ಸಂಸ್ಥೆಗಳ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸುತ್ತಿರುವುದು ಸಂತಸದ ಸಂಗತಿ. ಈ ಶೈಕ್ಷಣಿಕ ಕಳಕಳಿ ಮನೆ ಮನೆಯಿಂದ ಪ್ರಾರಂಭವಾಗಬೇಕು.ಶಿಕ್ಷಣದ ಬಲವರ್ಧನೆಗೆ ಎಲ್ಲರಊ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.

ಅಧ್ಯಕ್ಷತೆ ವಹಿಸಿದ ರಾಜ್ಯ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ ಮಾತನಾಡಿ, ಜನರಲ್ಲಿನ ಮೂಢನಂಬಿಕೆ, ಅಂಧಶ್ರದ್ಧೆ, ಅಂಧಕಾರಗಳನ್ನು ಅಳಿಸಿ, ವೈಚಾರಿಕ ಜಾಗೃತಿ ಮೂಡಿಸುವಲ್ಲಿ ಅಬ್ಬೆತುಮಕೂರಿನ ಶ್ರೀಗಳು ಸಾಕಷ್ಟು ಕೆಲಸ ಮಾಡುತ್ತ್ದ್ದಿದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಸಾನ್ನಿಧ್ಯ ವಹಿಸಿದ್ದ ಗಂಗಾಧರ ಸ್ವಾಮೀಜಿ ಆಶೀರ್ವಚನ ನೀಡಿದರು. ಅತಿ ಹೆಚ್ಚು ಅಂಕ ಗಳಿಸಿ ಸಂಸ್ಥೆಗೆ ಕೀರ್ತಿ ತಂದ ಶ್ರೀದೇವಿ, ಶಿವಕುಮಾರ, ಶೀಲಾ ಮಿಂಚಿನಾಳ ಮತ್ತು ಮೊಗಲಮ್ಮ ಅವರನ್ನು ಶ್ರೀಗಳು ಸತ್ಕರಿಸಿ, ಆಶೀರ್ವದಿಸಿದರು. ಸಂಸ್ಥೆಯ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಡೆಸಿಕೊಟ್ಟ ಸಾಂಸ್ಕೃತಿಕ ಕಾರ್ಯಕ್ರಮಗಳು ಜನಮನ ರಂಜಿಸಿದವು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.