ವಿಶ್ವಾಸದಲ್ಲಿ ಮುಂಬೈ ಇಂಡಿಯನ್ಸ್

7

ವಿಶ್ವಾಸದಲ್ಲಿ ಮುಂಬೈ ಇಂಡಿಯನ್ಸ್

Published:
Updated:

ಪುಣೆ (ಪಿಟಿಐ): ಸತತ ಮೂರು ಪಂದ್ಯಗಳಲ್ಲಿ ಪುಣೆ ವಾರಿಯರ್ಸ್‌ಗೆ ನಿರಾಸೆ ಕಾಡಿದೆ. ಮತ್ತೆ ಗೆಲುವಿನ ಹಾದಿ ಹಿಡಿಯಬೇಕು. ಆದರೆ ಈ ನಿರೀಕ್ಷೆ ನಿಜವಾಗುವುದು ಸುಲಭವಲ್ಲ. ಏಕೆಂದರೆ ಗುರುವಾರದ ಪಂದ್ಯದಲ್ಲಿ ಎದುರಾಗಲಿರುವುದು ಮುಂಬೈ ಇಂಡಿಯನ್ಸ್.ಡೆಕ್ಕನ್ ಚಾರ್ಜರ್ಸ್ ವಿರುದ್ಧದ ಪಂದ್ಯದಲ್ಲಿ ಗೆದ್ದು ಕುಂದಿದ್ದ ಉತ್ಸಾಹವನ್ನು ಮತ್ತೆ ಹೆಚ್ಚಿಸಿಕೊಂಡಿರುವ ಹರಭಜನ್ ಸಿಂಗ್ ನಾಯಕತ್ವದ ತಂಡವು ಅದೇ ಹುಮ್ಮಸ್ಸಿನೊಂದಿಗೆ ಮುನ್ನುಗ್ಗುವ ಕನಸು ಕಂಡಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ-20 ಟೂರ್ನಿಯ ಐದನೇ ಅವತರಣಿಕೆಯಲ್ಲಿ ಸದ್ಯ ಉತ್ತಮ ಸ್ಥಿತಿಯಲ್ಲಿರುವ ಇಂಡಿಯನ್ಸ್ ಸುಲಭದ ಎದುರಾಳಿಯಂತೂ ಅಲ್ಲ. ಆದ್ದರಿಂದ ಆತಿಥೇಯ ವಾರಿಯರ್ಸ್ ಸಂಕಷ್ಟ ಹೆಚ್ಚು.ಡೆಲ್ಲಿ ಡೇರ್‌ಡೆವಿಲ್ಸ್ ಎದುರು ಮುಗ್ಗರಿಸಿದ ನಂತರ ಸೌರವ್ ಗಂಗೂಲಿ ಪಡೆಯು ಸಂಪೂರ್ಣವಾಗಿ ಲಯ ತಪ್ಪಿದೆ. ಲೀಗ್ ಪಟ್ಟಿಯಲ್ಲಿ ಪಾಯಿಂಟುಗಳ ಕೊರತೆಯಿಂದ ಸೊರಗಿ ನಿಂತಿದ್ದ ಡೆಕ್ಕನ್ ಚಾರ್ಜರ್ಸ್ ವಿರುದ್ಧ ಸತತ ಎರಡು ಪಂದ್ಯಗಳಲ್ಲಿನ ಸೋಲಂತೂ ಸಹನೀಯ ಎನಿಸಲಿಲ್ಲ. ಈ ಬಾರಿಯ ಐಪಿಎಲ್‌ನಲ್ಲಿ ದುರ್ಬಲವೆಂದು ಪರಿಗಣಿಸಲಾದ ಚಾರ್ಜರ್ಸ್ ವಿರುದ್ಧವೇ ನಿರಾಸೆ ಹೊಂದಿದ ಕಾರಣ ವಾರಿಯರ್ಸ್ ಸುತ್ತ ಆತಂಕದ ಹುತ್ತ ಬೆಳೆದಿದೆ. ಅದನ್ನು ಒಡೆದು ಮತ್ತೆ ಪುಟಿದೆದ್ದು ನಿಲ್ಲಬೇಕು. ಅದೇ `ದಾದಾ~ ಪಡೆಯ ಮುಂದಿರುವ ಸವಾಲು.

 ಪಂದ್ಯದ ಆರಂಭ: ರಾತ್ರಿ 8.00ಕ್ಕೆ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry