ಬುಧವಾರ, ಅಕ್ಟೋಬರ್ 16, 2019
21 °C

ವಿಶ್ವಾಸಪೂರ್ಣ ವೇಗ!

Published:
Updated:

ಪರ್ತ್ (ಪಿಟಿಐ): ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಲ್ ತಮ್ಮ ವೇಗಿಗಳ ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ.ಗಾಯಗೊಂಡಿರುವ ಜೇಮ್ಸ ಪ್ಯಾಟಿನ್ಸನ್ ಅನುಪಸ್ಥಿತಿಯಲ್ಲಿಯೂ ತಂಡವು ಬೌಲಿಂಗ್ ವಿಭಾಗದಲ್ಲಿ ದುರ್ಬಲವಲ್ಲ ಎಂದು ಸ್ಪಷ್ಟಪಡಿಸಿರುವ ಅವರು `ಪ್ಯಾಟಿನ್ಸನ್ ಬದಲಿಗೆ ರ‌್ಯಾನ್ ಹ್ಯಾರಿಸ್ ಇಲ್ಲವೆ ಮೈಕಲ್ ಸ್ಟಾರ್ಕ್ ಆಡಲಿದ್ದಾರೆ. ಇಬ್ಬರೂ ಸಮರ್ಥರು~ ಎಂದರು.ಭಾರತ ವಿರುದ್ಧದ ಮೂರನೇ ಟೆಸ್ಟ್‌ಗಾಗಿ ಗುರುವಾರ ಇಲ್ಲಿ ಅಭ್ಯಾಸ ಮಾಡಿದ ನಂತರ ಮಾತನಾಡಿದ ಕ್ಲಾರ್ಕ್ `ಹ್ಯಾರಿಸ್ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ. ನಾನು ದೀರ್ಘ ಕಾಲದಿಂದ ಅವರನ್ನು ಗಮನಿಸಿದ್ದೇನೆ. ದೇಶಿ ಕ್ರಿಕೆಟ್‌ನಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದಾರೆ~ ಎಂದ ಅವರು ಶುಕ್ರವಾರ ಆರಂಭವಾಗುವ ಪಂದ್ಯದಲ್ಲಿ ಮೂರು ಇಲ್ಲವೆ ನಾಲ್ಕು ಪರಿಣತ ವೇಗಿಗಳನ್ನು ಆಡಿಸುವ ಸಂಕೇತ ನೀಡಿದರು.`ಈ ಅಂಗಳದಲ್ಲಿ ವೇಗ ಪರಿಣಾಮಕಾರಿ. ಅದರಲ್ಲಿಯೂ ಟೆಸ್ಟ್‌ನ ಮೊದಲ ದಿನದಾಟದಲ್ಲಿ ವೇಗಿಗಳು ಮಾಡುವ ಪರಿಣಾಮ ಮಹತ್ವದ್ದು. ಪ್ರತಿಯೊಂದು ಬಾರಿ ಹೊಸ ಚೆಂಡಿನೊಂದಿಗೆ ದಾಳಿ ನಡೆಸುವಾಗ ಯಶಸ್ಸು ಸಿಗುವ ಸಾಧ್ಯತೆ ಹೆಚ್ಚು~ ಎಂದು ವಿವರಿಸಿದರು.

Post Comments (+)