ಗುರುವಾರ , ಮೇ 6, 2021
33 °C

ವಿಶ್ವಾಸಮತ ಯಾಚನೆ : ಜೆಡಿಯುಗೆ ಬಹುಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಟ್ನಾ (ಪಿಟಿಐ) : ಬಿಜೆಪಿ ಜತೆ ಮೈತ್ರಿ ಮುರಿದುಕೊಂಡು ಎನ್ ಡಿಎಯಿಂದ ಹೊರಬಂದ ಬಳಿಕ ಅಲ್ಪಮತಕ್ಕೆ ಕುಸಿದಿದ್ದ ಜೆಡಿಯು ಬುಧವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಗಳಿಸುವಲ್ಲಿ ಯಶಸ್ವಿಯಾಗಿದೆ.ಕಾಂಗ್ರೆಸ್, ಸಿಪಿಐ ಮತ್ತು ನಾಲ್ವರು ಪಕ್ಷೇತರ ಶಾಸಕರ ಸೇರಿದಂತೆ ಒಟ್ಟು 126 ಮತಗಳು ಸರ್ಕಾರದ ಪರವಾಗಿ ಬಂದವು.ವಿಶ್ವಾಸಮತಯಾಚನೆ ಕಲಾಪವನ್ನು ಬಹಿಷ್ಕರಿಸಿ ಬಿಜೆಪಿ ಸಭಾತ್ಯಾಗ ಮಾಡಿತು. 243 ಸದಸ್ಯ  ಬಲದ ಸದನದಲ್ಲಿ ಬಿಜೆಪಿಯ 91 ಶಾಸಕರು ಮತ್ತು ಎಲ್ ಜೆಪಿಯ ಓರ್ವ ಶಾಸಕನ ಸಭಾತ್ಯಾಗದ ಬಳಿಕ, 126 ಮತಗಳನ್ನು ಪಡೆಯುವಲ್ಲಿ ಜೆಡಿಯು ಯಶಸ್ವಿಯಾಯಿತು. ಆರ್ ಜೆಡಿಯ 22 ಶಾಸಕರು ಹಾಗೂ ಇಬ್ಬರು ಪಕ್ಷೇತರರು ಸರ್ಕಾರದ ವಿರುದ್ಧ ಮತ ಚಲಾವಣೆ ಮಾಡಿದರು.ಇದಕ್ಕೂ ಮುನ್ನ ವಿಧಾನಸಭೆಯಲ್ಲಿ ಜೆಡಿಯು ವಿಶ್ವಾಸಮತ ಯಾಚನೆಗೆ ಮುಂದಾದಾಗ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಎನ್ ಡಿಎಗೆ ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ಬಿಜೆಪಿ ಶಾಸಕರು ಆರೋಪಿಸಿದರು. ಇದೇ ವೇಳೆ ಸಭಾತ್ಯಾಗ ಮಾಡುವಂತೆ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನಂದಕಿಶೋರ್ ಯಾದವ್ ಅವರ ಕರೆಗೆ ಓಗೊಟ್ಟ ಬಿಜೆಪಿಯ 91 ಶಾಸಕರು ಸದನದಿಂದ ಹೊರನಡೆದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.