ಸೋಮವಾರ, ಆಗಸ್ಟ್ 19, 2019
23 °C

ವಿಶ್ವ ಪೊಲೀಸ್ ಕ್ರೀಡಾಕೂಟ: ಭಾರತಕ್ಕೆ 11 ಬಂಗಾರ

Published:
Updated:

ಬೆಲ್‌ಫಾಸ್ಟ್, ಐರ್ಲೆಂಡ್ (ಪಿಟಿಐ): ಉತ್ತಮ ಪ್ರದರ್ಶನ ತೋರುತ್ತಿರುವ ಭಾರತದ ಸ್ಪರ್ಧಿಗಳು ಇಲ್ಲಿ ನಡೆಯುತ್ತಿರುವ `15ನೇ ವಿಶ್ವ ಪೊಲೀಸ್ ಹಾಗೂ ಅಗ್ನಿ ಶಾಮಕ ಕ್ರೀಡಾಕೂಟ'ದಲ್ಲಿ 11 ಬಂಗಾರ ಸೇರಿದಂತೆ 21 ಪದಕ ಗೆದ್ದಿದ್ದಾರೆ.ಕ್ರೀಡಾಕೂಟದ ಮೊದಲ ದಿನ 6 ಪದಕ ಜಯಿಸಿದ್ದ ಭಾರತದ ಸ್ಪರ್ಧಿಗಳು, ಎರಡನೇ ದಿನ 15 ಪದಕ ಗೆದ್ದು ಗಮನಾರ್ಹ ಸಾಧನೆ ಮಾಡಿದ್ದಾರೆ.ಬಿಎಸ್‌ಫ್‌ನ ಎಸ್.ಐ. ನಂದರ್ ಆನಂದ್ ಭಾರತದ ಪರ ಮೊದಲ ಪದಕ ಗೆದ್ದರು. ಪುರುಷರ ಈಜು ಸ್ಪರ್ಧೆಯ 400 ಮೀ ಫ್ರಿಸ್ಟೈಲ್ ಸ್ಪರ್ಧೆಯಲ್ಲಿ ಆನಂದ್ (4:12.21 ಸೆ.) ಬಂಗಾರದ ಸಾಧನೆ ತೋರಿದರು. 200 ಮೀ. ವೈಯಕ್ತಿಕ ಮೆಡ್ಲೆ ವಿಭಾಗದಲ್ಲೂ ಆನಂದ್ (2:19.12 ಸೆ.) ಚಿನ್ನ ಗೆದ್ದರು.

Post Comments (+)