ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ವಿರೋಧ

7

ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ವಿರೋಧ

Published:
Updated:

ಗುಲ್ಬರ್ಗ: ಜೂನ್ 6ರಿಂದ 8ರ ವರೆಗೆ ಬೆಂಗಳೂರಿನಲ್ಲಿ ನಡೆಸಲಾಗುತ್ತಿರುವ 2ನೇ ವಿಶ್ವ ಬಂಡವಾಳ ಹೂಡಿಕೆದಾರರ ಸಮಾವೇಶ ಹಾಗೂ ಇದೇ 28ರಂದು ಗುಲ್ಬರ್ಗದಲ್ಲಿ ನಡೆಸುತ್ತಿರುವ ರೋಡ್ ಶೋ ವಿರೋಧಿಸಿ ಸಿಪಿಐ(ಎಂ) ಕಾರ್ಯಕರ್ತರು ಶುಕ್ರವಾರ ಇಲ್ಲಿನ ಮಿನಿ ವಿಧಾನಸೌಧದ ಎದುರು ಪ್ರತಿಭಟನಾ ಧರಣಿ ನಡೆಸಿದರು.ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ನಿತ್ಯಾನಂದಸ್ವಾಮಿ ಮಾತನಾಡಿ, ರೈತರ ಕೃಷಿ ಭೂಮಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡು ಕಂಪೆನಿಗಳಿಗೆ ಹಸ್ತಾಂತರ ಮಾಡುವ ಹುನ್ನಾರವನ್ನು ವಿರೋಧಿಸುತ್ತೇವೆ ಎಂದರು.ಜನರಿಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಕೈಗಾರಿಕೆಗಳು ಬೇಕಾಗಿದೆ. ಕೈಗಾರಿಕೆಗಳನ್ನು ಸ್ಥಾಪಿಸುವ ನೆಪದಲ್ಲಿ ಉತ್ತಮ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳುವುದು ಸರಿಯಲ್ಲ. ಬಂಜರು ಭೂಮಿಯಲ್ಲೆ ಕೈಗಾರಿಕೆಗಳನ್ನು ಆರಂಭಿಸಬಹುದಾಗಿದೆ. ಅನಿವಾರ್ಯವಾಗಿ ಕೈಗಾರಿಕೆಗಳನ್ನು ಸ್ಥಾಪಿಸುವುದಿದ್ದರೆ, ರೈತರಿಗೆ ಯೋಗ್ಯ ಪರಿಹಾರ ಕಲ್ಪಿಸಿ ಅವರ ಒಪ್ಪಿಗೆ ಪಡೆದುಕೊಂಡು ಭೂ ಸ್ವಾಧೀನ ಪ್ರಕ್ರಿಯೆಯನ್ನು ಆರಂಭಿಸಬೇಕು ಎಂದು ತಿಳಿಸಿದರು.ಕಂಪೆನಿಯ ಲಾಭದಲ್ಲಿ ಪ್ರತಿವರ್ಷ ರೈತರಿಗೆ ಪಾಲು ನೀಡುವಂತಾಗಬೇಕು. ಕೈಗಾರಿಕೆಗಳಿಗೆ ಬಿಟ್ಟುಕೊಡುವ ಭೂಮಿಯಲ್ಲಿ ಗೇಣಿದಾರರಾಗಿ ಕೆಲಸ ಮಾಡುತ್ತಿದ್ದವರಿಗೂ ನ್ಯಾಯ ಸಮ್ಮತವಾದ ಪರಿಹಾರ ಕಲ್ಪಿಸಬೇಕು. ಕಂಪೆನಿಗಳ ಪರವಾಗಿ ವರ್ತಿಸುತ್ತಿರುವ ರಾಜ್ಯ ಸರ್ಕಾರವು ಕರ್ನಾಟಕ ಭೂ ಸುಧಾರಣಾ ಕಾಯ್ದೆಯನ್ನು ತಿದ್ದುಪಡಿ ಮಾಡಲು ಹೊರಟಿರುವುದನ್ನು ಸಿಪಿಐ(ಎಂ) ಖಂಡಿಸುತ್ತದೆ ಎಂದರು.ಭೀಮಶೆಟ್ಟಿ ಯಂಪಳ್ಳಿ, ಸುಧಾಮ ಧನ್ನಿ, ಅಶೋಕ ಮ್ಯಾಗೇರಿ, ಬಾಬು ಸಿಂದಗಿ, ಚಂದು ಜಾಧವ, ಮಲ್ಲಮ್ಮ ಕೋಡ್ಲಿ, ನಾಗಯ್ಯಸ್ವಾಮಿ, ವೀರಭದ್ರ ಕಲ್ಬುರ್ಗಿ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry