ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್, ಸೇಠಿ ಗೆಲುವಿನ ಓಟ

7

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಪಂಕಜ್, ಸೇಠಿ ಗೆಲುವಿನ ಓಟ

Published:
Updated:

ಲೀಡ್ಸ್ (ಪಿಟಿಐ): ಭಾರತದ ಪಂಕಜ್ ಅಡ್ವಾಣಿ, ಗೀತ್ ಸೇಠಿ ಹಾಗೂ ಧ್ರುವ ಸಿತ್ವಾಲ್ ಇಲ್ಲಿ ನಡೆಯುತ್ತಿರುವ ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.ಭಾನುವಾರ ನಡೆದ ಸ್ಪರ್ಧೆಯಲ್ಲಿ ಬೆಂಗಳೂರಿನ ಅಡ್ವಾಣಿ 630-294ರಲ್ಲಿ ಇಂಗ್ಲೆಂಡ್‌ನ ಜಾನ್ ಹರ್ಟೆಲ್ ಅವರನ್ನು ಮಣಿಸಿದರು.  ಮೊದಲ ಪಂದ್ಯದಲ್ಲಿ ಪಂಕಜ್ ಅಸ್ಟ್ರಿಯದ ಮಾರ್ಟಿನ್ ಶ್ಮಿಟ್‌ಗೆ ಸೋಲಿನ ಕಹಿ ತೋರಿಸಿದ್ದರು. ವಿಶ್ವ ಬಿಲಿಯರ್ಡ್ಸ್‌ನಲ್ಲಿ ರನ್ನರ್ ಅಪ್ ಆಗಿದ್ದ ಸಿತ್ವಾಲ್ 572-156ರಲ್ಲಿ ಆಸ್ಟ್ರೇಲಿಯಾದ ನೀಲ್ ಬೋಲ್ಟನ್ ಎದುರು ಗೆಲುವು ಸಾಧಿಸಿದರು. ಭಾರತದ ಇನ್ನೊಬ್ಬ ಸ್ಪರ್ಧಿ ಸೇಠಿ 522-268ರಲ್ಲಿ ಇಂಗ್ಲೆಂಡ್‌ನ ನಲಿನ್ ಪಟೇಲ್ ಅವರಿಗೆ ಸೋಲುಣಿಸಿದರು.ಕೋಲ್ಕತ್ತದ ಸೌರವ್ ಕೊಠಾರಿ ಕೂಡಾ ಗುಂಪು 1ರ ಸ್ಪರ್ಧೆಯಲ್ಲಿ ಉತ್ತಮ ಪ್ರದರ್ಶನ ನೀಡಿದರು. ಅವರು ವೇಯ್ನ ಡೊಲೆ, ಡೇವಿಸ್ ಹಾಗೂ ರಾಬಿನ್ ವಿಲ್ಸನ್ ಎದುರು ಜಯ ಸಾಧಿಸಿದರು. `ಟೈಮ್ ಫಾರ್ಮೆಟ್~ ಮಾದರಿಯ ಪಂದ್ಯಗಳ `ಡಿ~ ಗುಂಪಿನಲ್ಲಿ ಅಲೋಕ್ ಕುಮಾರ್, ದೇವೇಂದ್ರ ಜೋಶಿ, ರೂಪೇಶ್ ಷಾ ಕೂಡಾ ಗಮನ ಸೆಳೆದರು.

ಭಾರತದ 18 ಸ್ಪರ್ಧಿಗಳು ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಇದೇ ಮೊದಲ ಸಲ ಪಾಲ್ಗೊಂಡಿದ್ದಾರೆ. ಒಟ್ಟು 65 ಸ್ಪರ್ಧಿಗಳು ಪೈಪೋಟಿ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry