ವಿಶ್ವ ಭೂಮಂಡಲ ಕಾಲಚಕ್ರ ಕಳಶ ಸ್ಥಾಪನೆ

7

ವಿಶ್ವ ಭೂಮಂಡಲ ಕಾಲಚಕ್ರ ಕಳಶ ಸ್ಥಾಪನೆ

Published:
Updated:

ಬೆಂಗಳೂರು: ಶಿವಯೋಗೀಶ್ವರ ವಿಶ್ವ ಕಲ್ಯಾಣ ಟ್ರಸ್ಟ್ ಈಚೆಗೆ ಆಯೋಜಿಸಿದ್ದ ವಿಶ್ವ ಭೂಮಂಡಲ ಕಾಲಚಕ್ರ ಕಳಶ ಸ್ಥಾಪನಾ ಕಾರ್ಯಕ್ರಮವನ್ನು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಮಠದ ಬಾಲಗಂಗಾಧರ ಸ್ವಾಮೀಜಿ ಅವರು ನೆರವೇರಿಸಿದರು.ನಂತರ ಮಾತನಾಡಿದ ಶಿವಕುಮಾರ ಸ್ವಾಮೀಜಿ, `ವಿಶ್ವದಲ್ಲಿ ಶಾಂತಿ ನೆಲೆಸಲು ಇಂತಹ ಆಚರಣೆಗಳು ಅಗತ್ಯವಿದೆ. ದೇಶದಲ್ಲಿ ಪ್ರಳಯವಾಗಲಿದೆ ಎಂಬ ಭೀತಿಯನ್ನು ಬಿತ್ತಲಾಗಿದ್ದು, ಈ ಕಳಸದ ಉತ್ಸವದಿಂದ ದೇಶದಲ್ಲಿ ಶಾಂತಿ ನೆಲೆಸಲಿದೆ' ಎಂದು ಆರ್ಶೀವಚನ ನೀಡಿದರು.ಪಾಂಡುಪುರ ಮಠದ  ತ್ರಿನೇತ್ರ ಸ್ವಾಮೀಜಿ, ವಿಧಾನ ಪರಿಷತ್ತಿನ ಸದಸ್ಯ ಪುಟ್ಟಣ ್ಣ, ತಮಿಳುನಾಡಿನ ಶಾಸಕ ಕುಪ್ಪಂ ಸೇರಿದಂತೆ ಗಣ್ಯರು ಕಳಸದ ದರ್ಶನ ಪಡೆದರು. ಕಾಡುಸಿದ್ದೇಶ್ವರ ಮಠಾಧೀಶ್ವರಾದ ಶಿವಯೋಗೀಶ್ವರ ಮಹಾಸ್ವಾಮೀಜಿ ಅವರು ಗಂಗಾ ಪೂಜೆ, ಗಣಪತಿ, ಪಂಚಕಳಸ, ನಂದಿ ಪೂಜೆಯನ್ನು ನೆರವೇರಿಸಿದರು. ಈ ಕಳಸ ಪೂಜೆ ಮತ್ತು ದರ್ಶನವು ಈ ತಿಂಗಳ 14ರವರೆಗೆ ಇರಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry