ಶನಿವಾರ, ಮಾರ್ಚ್ 6, 2021
18 °C

ವಿಶ್ವ ಸಂಗೀತದ ಮಾಧುರ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಸಂಗೀತದ ಮಾಧುರ್ಯ

ಮೈಂಡ್‌ಲಾಜಿಕ್ಸ್: ವಿಶ್ವ ಸಂಗೀತ ದಿನದ ಅಂಗವಾಗಿ ಮಂಗಳವಾರ `ಹ್ಯಾಂಡ್‌ಶೇಕ್~ ಸಂಗೀತ ಕಛೇರಿ.ರ‌್ಯಾಟಲ್ ಅಂಡ್ ಹಮ್ ಮ್ಯೂಸಿಕ್ ಸೊಸೈಟಿ, ಈಶಾನ್ಯ ವಲಯ ಸಾಂಸ್ಕೃತಿಕ ಕೇಂದ್ರ, ನಾಗಾಲ್ಯಾಂಡ್ ವಿಶ್ವವಿದ್ಯಾಲಯ ಮತ್ತು ನಾಗಾಲ್ಯಾಂಡ್ ಪ್ರವಾಸೋದ್ಯಮ ಸಹಕಾರದಲ್ಲಿ ಮೈಂಡ್‌ಲಾಜಿಕ್ಸ್ ತಂತ್ರಜ್ಞಾನ ಅಭಿವೃದ್ಧಿ ಕಂಪೆನಿ ಈ ವಿಶಿಷ್ಟ ಸಂಗೀತ ಕಛೇರಿ ಏರ್ಪಡಿಸಿದೆ.ಗ್ರಾಮಿ ಪ್ರಶಸ್ತಿ ವಿಜೇತ ವಿಶಿಷ್ಟ ಸಂಗೀತಗಾರ ಪಂಡಿತ್ ವಿಶ್ವ ಮೋಹನ್ ಭಟ್ ಇಲ್ಲಿ ತಮ್ಮ ಮೋಹನ ವೀಣೆ ನುಡಿಸುವರು. ದೇಶದ ಖ್ಯಾತ ಮಹಿಳಾ ತಬಲಾ ವಾದಕಿ ಮುಂಬೈನ ಅನುರಾಧಾ ಪಾಲ್, ಚೆನ್ನೈನ ಕೀ ಬೋರ್ಡ್ ಪ್ರತಿಭೆ ಕೆ. ಸತ್ಯನಾರಾಯಣ ಇವರೆಲ್ಲ ತಮ್ಮ  ಕಲೆ ಅನಾವರಣಗೊಳಿಸುವರು.ನಾಗಾ ಐಡಲ್ 2009ರ ಪ್ರಶಸ್ತಿ ವಿಜೇತೆ ಕೆನಿ ಚಾಲೆ, ನಾಗಾ ಜನಪದ ಸಂಗೀತದಲ್ಲಿ ಹೆಸರು ಗಳಿಸಿರುವ ಲೊಹೆ ಸಹೋದರಿಯರು ಕಾರ್ಯಕ್ರಮ ನೀಡುವರು.ಬೆಂಗಳೂರಿನ ಸ್ವರಾತ್ಮಾ ತಂಡ, ಶಿಲಾಂಗ್‌ನ ಸೋಲ್‌ಮೇಟ್, ಮೆಲೊಡ್ರಾಮ, ಡಿವೈನ್ ಕನೆಕ್ಷನ್ ಇತ್ಯಾದಿ ಸಂಗೀತ ತಂಡಗಳು ಮತ್ತು ಕೆಲ ಜನಪದ ಕಲಾವಿದರ ಸಂಗೀತ ವೈವಿಧ್ಯವನ್ನೂ ಇಲ್ಲಿ ಸವಿಯಬಹುದು.ಸ್ವರಾತ್ಮಾ ಜಾನಪದ ಮತ್ತು ಪಾಶ್ಚಿಮಾತ್ಯ ಸಂಗೀತ ಬೆಸೆದು ಫ್ಯೂಷನ್ ಸಂಗೀತದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ತಂಡ. ವರ್ಜಿನ್ ಮ್ಯೂಸಿಕ್ ಮುಖಾಂತರ 2009ರಲ್ಲಿ ಚೊಚ್ಚಲ ಆಲ್ಬಂ ಲೋಕಾರ್ಪಣೆ ಮಾಡಿದೆ.ಬ್ರಿಟನ್, ಹಾಂಕಾಂಗ್, ಸಿಂಗಪುರಗಳಲ್ಲಿ ಕಾರ್ಯಕ್ರಮ ನೀಡಿ ಮೆಚ್ಚುಗೆ ಗಳಿಸಿದೆ. ಡಿವೈನ್ ಕನೆಕ್ಷನ್ `ಎಂಟಿವಿ ದೇಸಿ ಬೀಟ್ಸ್~ ಪ್ರಶಸ್ತಿ ಗಳಿಸಿದೆ. ಶಿಲಾಂಗ್‌ನ `ಸೋಲ್ ಮೇಟ್ಸ್~ ತಂಡ ದೇಶ ಮತ್ತು ವಿದೇಶಗಳಲ್ಲಿ 500ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿದೆ.

ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿ ಕಾವಲ್. ಸಂಜೆ 6. ಪ್ರವೇಶ ಉಚಿತ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.