ವಿಶ್ವ ಹಾಕಿ ಲೀಗ್: ಬೈ ಪಡೆದ ಭಾರತ ತಂಡ

7

ವಿಶ್ವ ಹಾಕಿ ಲೀಗ್: ಬೈ ಪಡೆದ ಭಾರತ ತಂಡ

Published:
Updated:

ಲುಸಾನ್; ಸ್ವಿಟ್ಜರ್‌ಲೆಂಡ್ (ಪಿಟಿಐ): ಭಾರತದ ಪುರುಷ ಹಾಗೂ ಮಹಿಳಾ ಹಾಕಿ ತಂಡದವರು ಅಂತರರಾಷ್ಟ್ರೀಯ ಹಾಕಿ ಫೆಡರೇಷನ್ ಆಶ್ರಯದಲ್ಲಿ ಮುಂದಿನ ವರ್ಷ ನಡೆಯಲಿರುವ ವರ್ಲ್ಡ್ ಲೀಗ್ ಪಂದ್ಯಗಳಿಗೆ ಬೈ ಪಡೆದಿದ್ದಾರೆ.2012-13ರಲ್ಲಿ ನಡೆಯಲಿರುವ ವರ್ಲ್ಡ್ ಲೀಗ್‌ನಲ್ಲಿ ‘ಬೈ’ ಪಡೆದ ಕಾರಣ ಭಾರತದ ಆಟಗಾರರು ನೇರವಾಗಿ ಎರಡನೇ ಸುತ್ತಿನ ಪಂದ್ಯಗಳಲ್ಲಿ ಆಡಲಿದ್ದಾರೆ. ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ತಂಡಗಳು 2014ರ ವರ್ಲ್ಡ್‌ಕಪ್ ಹಾಗೂ ಒಲಿಂಪಿಕ್‌ನಲ್ಲಿ ಪಾಲ್ಗೊಳ್ಳಲು ಅರ್ಹತೆ ಪಡೆಯುತ್ತವೆ. ‘ಪುರುಷ ಮತ್ತು ಮಹಿಳೆಯರ ಮೊದಲ ಹಾಗೂ ಎರಡನೇ ಸುತ್ತಿನ ಪಂದ್ಯಗಳು 2012ರಲ್ಲಿ ಮತ್ತು ಮೂರು, ನಾಲ್ಕನೇ ಸುತ್ತಿನ ಪಂದ್ಯಗಳು 2013ರಲ್ಲಿ ನಡೆಯಲಿವೆ’ ಎಂದು ಎಫ್‌ಐಎಚ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೆಲ್ಲೆ ಫೈರ್‌ವೆದರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry