ಶುಕ್ರವಾರ, ಜೂನ್ 25, 2021
21 °C

ವಿಶ್ವ ಹಾಕಿ ಸರಣಿ: ಕರ್ನಾಟಕ ಲಯನ್ಸ್‌ಗೆ ಮತ್ತೊಂದು ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಶ್ವ ಹಾಕಿ ಸರಣಿ: ಕರ್ನಾಟಕ ಲಯನ್ಸ್‌ಗೆ ಮತ್ತೊಂದು ಸೋಲು

ಬೆಂಗಳೂರು: ವಿಶ್ವ ಹಾಕಿ ಸರಣಿಯಲ್ಲಿ ಕರ್ನಾಟಕ ಲಯನ್ಸ್ ತಂಡದ ಸೋಲಿನ ಕತೆ ಮುಂದುವರಿದಿದೆ. ಸೋಮವಾರ ನಡೆದ ಪಂದ್ಯದಲ್ಲಿ ಲಯನ್ಸ್ ತಂಡ 1-3 ರಲ್ಲಿ ಭೋಪಾಲ್ ಬಾದ್‌ಷಾ ಎದುರು ಪರಾಭವಗೊಂಡಿತು.ಎರಡು ಗೋಲುಗಳನ್ನು ತಂದಿತ್ತ ಕರಣ್ ಲಕ್ಷ್ಮಣ್ ಭಾಸ್ಕರ್ ಅವರು ಭೋಪಾಲ್ ತಂಡದ ಗೆಲುವಿನ ರೂವಾರಿ ಎನಿಸಿದರು. ಕರ್ನಾಟಕ ತಂಡಕ್ಕೆ ಎದುರಾದ ಸತತ ಮೂರನೇ ಸೋಲು ಇದಾಗಿದೆ.ಲಯನ್ಸ್ ತಂಡದ ಗೆಲುವನ್ನು ನಿರೀಕ್ಷಿಸಿ ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಆದರೆ ಅರ್ಜುನ್ ಹಾಲಪ್ಪ ನೇತೃತ್ವದ ತಂಡ ಮಿಂಚಿನ ಪ್ರದರ್ಶನ ನೀಡಲು ವಿಫಲವಾಯಿತು.ಪಂದ್ಯದ ಮೊದಲ ಗೋಲು 41ನೇ ನಿಮಿಷದಲ್ಲಿ ದಾಖಲಾಯಿತು. ಹಿರಿಯ ಆಟಗಾರ ಧನರಾಜ್ ಪಿಳ್ಳೈ ಚೆಂಡನ್ನು ಗುರಿ ಸೇರಿಸಿ ಲಯನ್ಸ್ ತಂಡಕ್ಕೆ ಮುನ್ನಡೆ ತಂದಿತ್ತರು. ಆದರೆ ಈ ಸಂತಸ ಹೆಚ್ಚು ಸಮಯ ಇರಲಿಲ್ಲ.

ಬಾದ್‌ಷಾ ತಂಡ ಎರಡು ನಿಮಿಷಗಳ ಒಳಗಾಗಿ ತಿರುಗೇಟು ನೀಡಿತು. ಕರಣ್ ಲಕ್ಷ್ಮಣ್ 43ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದಾದ ಎರಡು ನಿಮಿಷಗಳ ಬಳಿಕ ಅವರು ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಇನ್ನೊಂದು ಗೋಲು ಗಳಿಸಿ ಮುನ್ನಡೆಯನ್ನು 2-1ಕ್ಕೆ ಹೆಚ್ಚಿಸಿಕೊಂಡರು.48ನೇ ನಿಮಿಷದಲ್ಲಿ ಸಮೀರ್ ದಾದ್ ಗೋಲು ಗಳಿಸಿ ಬಾದ್‌ಷಾ ತಂಡದ ಗೆಲುವನ್ನು ಖಚಿತಪಡಿಸಿಕೊಂಡರು.

ಬೆಂಗಳೂರಿನಲ್ಲಿ ಮಂಗಳವಾರ ನಡೆಯುವ ಪಂದ್ಯದಲ್ಲಿ ಕರ್ನಾಟಕ ಲಯನ್ಸ್- ಚಂಡೀಗಡ ತಂಡಗಳು ಎದುರಾಗಲಿವೆ. ಪಂದ್ಯ ಆರಂಭ: ರಾತ್ರಿ 9.00.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.