ಭಾನುವಾರ, ಏಪ್ರಿಲ್ 11, 2021
32 °C

ವಿಶ್ವ ಹಿಂದೂ ಪರಿಷತ್‌ನ ಬೈಠಕ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ನಗರದ ವಿಶ್ವ ಹಿಂದೂ ಪರಿಷತ್ ವತಿಯಿಂದ ಇತ್ತೀಚೆಗೆ ಪ್ರಾಂತೀಯ ಬೈಟಕ್ ಆಯೋಜಿಸಲಾಗಿತ್ತು. ಉತ್ತರ ಕರ್ನಾಟಕ ಪ್ರಾಂತದ ಎಲ್ಲ ಜಿಲ್ಲೆಯ ಜಿಲ್ಲಾಸ್ತರ ಮತ್ತು ಮೇಲ್ಪಟ್ಟ ಪದಾಧಿಕಾರಿಗಳಿಗಾಗಿ ನಡೆದ ಎರಡು ದಿನದ ಬೈಟಕ್‌ದಲ್ಲಿ ಭಯೋತ್ಪಾದನೆ, ಮತಾಂತರ, ಗೋಹತ್ಯೆ, ಹಿಂದೂ ಸ್ವಾಮೀಜಿಗಳ ಮೇಲೆ ಷಡ್ಯಂತರ ಮತ್ತು ಹಿಂದೂ ಯುವತಿಯರ ಅಪಹರಣ ಮೊದಲಾದ ವಿಷಯಗಳ ಕುರಿತು ಚರ್ಚಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ದೇವರ ಹುಬ್ಬಳ್ಳಿಯ ಸಿದ್ಧಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಕೆಲವೊಂದು ಪ್ರಾಂತ ಮತ್ತು ಜಿಲ್ಲಾ ಮಟ್ಟದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ರಾಂತೀಯ ಸೇವಾ ಸಹ ಪ್ರಮುಖರಾಗಿ ಕುಶೇಂದ್ರ ಪ್ರಭು, ಜಿಲ್ಲಾ ಕಾರ್ಯದರ್ಶಿಯಾಗಿ ರಾಘವೇಂದ್ರ ಕುಲಕರ್ಣಿ ಹಾಗೂ ಕಲ್ಲಪ್ಪ ಅಂಗಡಿ ಅವರನ್ನು ನೇಮಿಸಲಾಯಿತು. ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾದ ಬಾಬುರಾವ್ ದೇಸಾಯಿ, ಕ್ಷೇತ್ರೀಯ ಕಾರ್ಯದರ್ಶಿ ಬಿ.ಎನ್.ಮೂರ್ತಿ, ಪ್ರಾಂತ ಪದಾಧಿಕಾರಿಗಳಾದ ಕೇಶವ ಹೆಗಡೆ, ಗಂಗಾಧರ ಹೆಗಡೆ, ಗೋವಿಂದ ನರೇಗಲ್ಲ, ರಮೇಶ ಕುಲಕರ್ಣಿ, ಶ್ರೀಧರ ದೀಕ್ಷಿತ, ಉಷಾ ದೀಕ್ಷಿತ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳಾದ ಕೃಷ್ಣಾ ಕುಮಟೆಕರ, ರಾಘವೇಂದ್ರ ಕುಲಕರ್ಣಿ, ರಾಜು ತೋರ್ಕೆ, ಚಂದ್ರು ಪಾಟೀಲ ಇದ್ದರು. ಕುಶೇಂದ್ರ ಪ್ರಭು ನಿರೂಪಿಸಿ, ವಂದಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.