ಭಾನುವಾರ, ಮಾರ್ಚ್ 7, 2021
30 °C

ವಿಷಯುಕ್ತ ಮಾವು, ಬಾಳೆಹಣ್ಣು ಮಾರಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಷಯುಕ್ತ ಮಾವು, ಬಾಳೆಹಣ್ಣು ಮಾರಾಟ

ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಈಗ ಮಾವಿನ ಹಣ್ಣಿನ ಮಾರಾಟದ ಭರಾಟೆ ಹೆಚ್ಚಿದೆ. ರಸಪುರಿ, ಆಫೋಸ್‌ ಸೇರಿದಂತೆ ವಿವಿಧ ಜಾತಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಅವುಗಳ ಬಣ್ಣಕ್ಕೆ ನಾಗರಿಕರು ಮಾರುಹೋಗುತ್ತಿದ್ದಾರೆ. ಆದರೆ, ಸರ್ಕಾರ ನಿಷೇಧಿಸಿರುವ ರಾಸಾಯನಿಕ ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಅವುಗಳನ್ನು ಮಾಗಿಸಲಾಗಿದೆ ಎಂಬುದು ಗ್ರಾಹಕರಿಗೆ ಗೊತ್ತಿಲ್ಲ. ಆದರೆ, ವ್ಯಾಪಾರಿಗಳು ಮಾತ್ರ ಕೈತುಂಬಾ ಲಾಭ ಮಾಡಿಕೊಳ್ಳುತ್ತಿದ್ದಾರೆ.ಬಾಳೆ ಹಣ್ಣು, ಸಪೋಟ ಹಣ್ಣನ್ನು ಕೂಡ ಇದೇ ರಾಸಾಯನಿಕ ಬಳಸಿ ಕೃತಕ ರೀತಿಯಲ್ಲಿ ಹಣ್ಣು ಮಾಡಿ ಮಾರಾಟ ಮಾಡುವುದು ನಡೆದಿದೆ. ಆದರೆ, ಇದಕ್ಕೆ ಕಡಿವಾಣ ಹಾಕಲು ಜಿಲ್ಲಾ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನುವುದು ನಾಗರಿಕರ ಆರೋಪ.ನಿತ್ಯವೂ ಜಿಲ್ಲಾ ಕೇಂದ್ರಕ್ಕೆ ಹೊರ ಜಿಲ್ಲೆಗಳಿಂದ ಮಾವು, ಬಾಳೆ, ಸಪೋಟ ಹಣ್ಣು ಪೂರೈಯಾಗುತ್ತದೆ. ದೊಡ್ಡ ವ್ಯಾಪಾರಿಗಳು ತಮ್ಮ ಗೋದಾಮುಗಳಲ್ಲಿ ಮಾವು, ಬಾಳೆ ಗೊನೆಗಳನ್ನು ರಾಶಿ ಹಾಕುತ್ತಾರೆ. ಬಳಿಕ ಕ್ಯಾಲ್ಸಿಯಂ ಕಾರ್ಬೈಡ್‌ ಬಳಸಿ ಮಾಗಿಸಿ ಮಾರುಕಟ್ಟೆಗೆ ಪೂರೈಸುತ್ತಾರೆ.ರೋಗ ಗ್ಯಾರಂಟಿ: ಈ ಹಣ್ಣುಗಳನ್ನು ತಿಂದರೆ ರೋಗಬರುವುದು ಗ್ಯಾರಂಟಿ. ಬಾಯಿಹುಣ್ಣು, ಕರುಳಿನ ಕ್ಯಾನ್ಸರ್‌, ಶ್ವಾಸಕೋಶ, ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬೇಕಾಗುತ್ತದೆ. ಆದರೆ, ಜನರ ಆರೋಗ್ಯದ ಸುರಕ್ಷತೆಯ ನಿಟ್ಟಿನಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ನಗರಸಭೆ ಆಡಳಿತ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ.ಶಿಕ್ಷಾರ್ಹ ಅಪರಾಧ: ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ ಅನ್ವಯ ಯಾವುದೇ ಹಣ್ಣುಗಳನ್ನು ರಾಸಾಯನಿಕ ಬಳಸಿ ಮಾಗಿಸಿ ಮಾರಾಟ ಮಾಡುವಂತಿಲ್ಲ. ಕಾಯ್ದೆ ಉಲ್ಲಂಘಿಸಿದರೆ ದಂಡ ಹಾಗೂ ಶಿಕ್ಷೆ ವಿಧಿಸಲು ಅವಕಾಶವಿದೆ. ಜತೆಗೆ, ಅಂತಹ ಮಳಿಗೆ, ದಾಸ್ತಾನುಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಅವಕಾಶವಿದೆ. ಆದರೆ, ಜಿಲ್ಲಾ ಕೇಂದ್ರದಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಈ ದಂಧೆಗೆ ಕಡಿವಾಣ ಹಾಕಿ ಕ್ರಮಜರುಗಿಸಿರುವ ಒಂದು ಉದಾಹರಣೆಯೂ ಇಲ್ಲ!ನಗರಸಭೆ ಆಡಳಿತವು ಹೋಟೆಲ್‌, ಅಂಗಡಿಗಳಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥಗಳನ್ನೇ ನಿಯಮಿತವಾಗಿ ಪರಿಶೀಲಿಸುವುದಿಲ್ಲ. ಪರವಾನಗಿ ನೀಡಿ ಕೈತೊಳೆದುಕೊಳ್ಳುತ್ತದೆ. ಇನ್ನು ರಾಸಾಯನಿಕಯುಕ್ತ ಹಣ್ಣುಗಳ ಮಾರಾಟಕ್ಕೆ ಕಡಿವಾಣ ಹಾಕುತ್ತದೆಯೇ? ಎಂದು ನಾಗರಿಕರು ಪ್ರಶ್ನಿಸುತ್ತಾರೆ.‘ಈಗ ನೈಸರ್ಗಿಕವಾಗಿ ಹಣ್ಣುಗಳನ್ನು ಮಾಗಿಸಿ ಮಾರಾಟ ಮಾಡುವುದಿಲ್ಲ. ಹಳ್ಳಿಗಳಿಂದ ಜನರು ಬುಟ್ಟಿಯಲ್ಲಿ ನಗರಕ್ಕೆ ಮಾವಿನ ಹಣ್ಣು ತಂದು ಮಾರಾಟ ಮಾಡಿದರೆ ಜನರು ಖರೀದಿ ಮಾಡಲು ಹಿಂದೇಟು ಹಾಕುತ್ತಾರೆ. ಆದರೆ, ಅಂಗಡಿ ಮಳಿಗೆಗಳಲ್ಲಿ ಆಕರ್ಷಕವಾಗಿ ಜೋಡಿಸಿಟ್ಟಿರುವ ಹಣ್ಣು ಖರೀದಿಸುತ್ತಾರೆ. ಇಂತಹ ವಿಷಯುಕ್ತ ಹಣ್ಣುಗಳ ಮಾರಾಟಕ್ಕೆ ಕಡಿವಾಣ ಹಾಕಬೇಕು. ಜತೆಗೆ, ಈ ಬಗ್ಗೆ ಜನರಲ್ಲಿಯೂ ಅರಿವು ಮೂಡಿಸಬೇಕು’ ಎನ್ನುತ್ತಾರೆ ಗ್ರಾಹಕ ಶಿವು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.