ಮಂಗಳವಾರ, ನವೆಂಬರ್ 12, 2019
28 °C

ವಿಷಲೇಪಿತ ಪತ್ರ: ಆರೋಪ ಕೈಬಿಟ್ಟ ಎಫ್‌ಬಿಐ

Published:
Updated:

ವಾಷಿಂಗ್ಟನ್(ಪಿಟಿಐ): ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಸೆನೆಟರ್‌ಗೆ ವಿಷಲೇಪಿತ ಪತ್ರ ಕಳುಹಿಸಿದ ಪ್ರಕರಣದಲ್ಲಿ ಆರೋಪಿ ಮೇಲೆ ಹಾಕಲಾಗಿದ್ದ ಎಲ್ಲ ಆರೋಪಗಳನ್ನು ಎಫ್‌ಬಿಐ  ಕೈಬಿಟ್ಟಿದೆ.ಶ್ವೇತಭವನಕ್ಕೆ ವಿಷಪೂರಿತ ಪತ್ರ ಕಳುಹಿಸಿದ ಆರೋಪದ ಮೇರೆಗೆ ಏ.17ರಂದು ಪೌಲ್ ಕೆವಿನ್ ಕ್ಯೂರಿಟ್ಸ್ ಎಂಬಾತನನ್ನು ಬಂಧಿಸಲಾಗಿತ್ತು.ಆರೋಪಿಯ ಮನೆಯಲ್ಲಿ ವಿಷಕಾರಕ ಅಂಶ ಪತ್ತೆಯಾಗಿಲ್ಲ ಎಂದು ಎಫ್‌ಬಿಐ ಸಿಬ್ಬಂದಿ ನ್ಯಾಯಾಲಯಕ್ಕೆ ತಿಳಿಸಿದ ಮಾರನೇ ದಿನ ಆರೋಪ ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ಪ್ರತಿಕ್ರಿಯಿಸಿ (+)