ಭಾನುವಾರ, ಏಪ್ರಿಲ್ 11, 2021
22 °C

ವಿಷಾಹಾರ ಸೇವನೆ ಗುರುತಿಸುವಿಕೆ: ಸಾಧನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ವಿಷಾಹಾರ ಸೇವನೆಯಾಗಿರುವುದನ್ನು ಮುಂಚಿತವಾಗಿಯೇ ಪತ್ತೆಹಚ್ಚಲು ನೆರವಾಗುವ ನಿರ್ದಿಷ್ಟ ಸಕ್ಕರೆ ಕಣಗಳನ್ನು ಮಾನವನ ದೇಹದಲ್ಲಿ ಪತ್ತೆಹಚ್ಚಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ.ಗ್ರಿಫಿತ್ ವಿಶ್ವವಿದ್ಯಾಲಯದ ಡಾ ಕ್ರಿಸ್ಟೋಫರ್ ಡೇ ನೇತೃತ್ವದ ಅಂತರಾಷ್ಟ್ರೀಯ ತಜ್ಞರ ತಂಡ ಈ ರೀತಿ ಹೇಳಿಕೊಂಡಿದೆ.  ಮಾನವನ ದೇಹದಲ್ಲಿರುವ ಎಲ್ಲಾ ಕಣಗಳೂ ಗ್ಲೈಕಾನ್ ಎಂಬ ಸಕ್ಕರೆಯ ಕಣಗಳಿಂದ ಲೇಪಿತವಾಗಿರುತ್ತವೆ. ಇವುಗಳು  ‘ಕಾಂಪಿಲೊಬ್ಯಾಕ್ಟರ್’ ಎಂದು ಕರೆಯಲಾಗುವ ಆಹಾರದಲ್ಲಿರುವ ಬ್ಯಾಕ್ಟೀರಿಯಾದಿಂದಾಗಿ ಬರುವ ಸಾಮಾನ್ಯವಾಗಿ ಕಾಯಿಲೆಯ ಪತ್ತೆ ಹಚ್ಚುವಿಕೆಯಲ್ಲಿ ಪ್ರಮುಖ ಪಾತ್ರವಹಿಸುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.