ಶನಿವಾರ, ಜೂನ್ 12, 2021
23 °C

ವಿಷ್ಣುಪ್ರಸಾದ್‌ಗೆ ಎಫ್‌ಎಂಎಸ್‌ಸಿಐ ಗೌರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಚೆನ್ನೈನ ವಿಷ್ಣು ಪ್ರಸಾದ್‌ ಅವರು ಭಾರತ ಮೋಟಾರ್‌ ಸ್ಪೋರ್ಟ್ಸ್‌ ಕ್ಲಬ್‌ಗಳ ಫೆಡರೇಷನ್‌ (ಎಫ್‌ಎಂಎಸ್‌ಸಿಐ) ನೀಡುವ ‘ವರ್ಷದ ಪ್ರತಿಭಾನ್ವಿತ ಮೋಟಾರ್‌ ಸ್ಪೋರ್ಟ್ಸ್‌ ಸ್ಪರ್ಧಿ’ ಗೌರವ ತಮ್ಮದಾಗಿಸಿಕೊಂಡಿದ್ದಾರೆ.2013ರ ಋತುವಿನಲ್ಲಿ ಮೋಟಾರ್‌ ಸ್ಪೋರ್ಟ್ಸ್‌ನಲ್ಲಿ ಸಾಧನೆ ಮಾಡಿದ ಚಾಲಕರನ್ನು ಶನಿವಾರ ರಾತ್ರಿ ಇಲ್ಲಿ ನಡೆದ ಎಫ್‌ಎಂಎಸ್‌ಸಿಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಗೌರವಿಸ ಲಾಯಿತು. ವಿಷ್ಣು ಪ್ರಸಾದ್‌ ಹೋದ ವರ್ಷ ನಡೆದ ಜೆಕೆ ಟೈರ್‌ ಮ್ಯಾಕ್ಸ್‌ ನ್ಯಾಷನಲ್‌ ಕಾರ್ಟಿಂಗ್‌ ಮತ್ತು ಜೆಕೆ ರೇಸಿಂಗ್‌ ಇಂಡಿಯಾ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.2013 ರ ಋತುವಿನಲ್ಲಿ ನಡೆದ ವಿವಿಧ ರಾಷ್ಟ್ರೀಯ ಚಾಂಪಿಯನ್‌ ಷಿಪ್‌ಗಳಲ್ಲಿ ಪ್ರಶಸ್ತಿ ಗೆದ್ದ ಎಲ್ಲ ಚಾಲಕರನ್ನು ಈ ವೇಳೆ ಗೌರವಿಸ ಲಾಯಿತು. ವಿದೇಶದಲ್ಲಿ ನಡೆದ ರೇಸ್‌ಗಳಲ್ಲಿ ಭಾರತವನ್ನು ಪ್ರತಿನಿಧಿಸಿದ ನಾರಾಯಣ್‌ ಕಾರ್ತಿಕೇಯನ್‌, ಕರುಣ್‌ ಚಂದೋಕ್‌, ಅರ್ಮಾನ್‌ ಇಬ್ರಾಹಿಂ ಮತ್ತು ಗೌರವ್‌ ಗಿಲ್‌ ಅವರನ್ನೂ ಗೌರವಿಸಲಾಯಿತು.ಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರ ಒಡೆತನದ ಸೂಪರ್‌ ಬೈಕ್‌ ತಂಡ ‘ಮಹಿ ರೇಸಿಂಗ್‌’ ಅನ್ನು ಈ ವೇಳೆ ಸನ್ಮಾನಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.