ವಿಷ್ಣು ಜನ್ಮದಿನ: ಮಕ್ಕಳಿಗೆ ಉಚಿತ ಕ್ಷೌರ

7

ವಿಷ್ಣು ಜನ್ಮದಿನ: ಮಕ್ಕಳಿಗೆ ಉಚಿತ ಕ್ಷೌರ

Published:
Updated:

ಬೆಂಗಳೂರು: ವಿಷ್ಣುವರ್ಧನ್‌ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯ ಕ್ಷೌರ­ಸೇವಾ ಸವಿತಾ ಸಮಾಜದ ಸದಸ್ಯರು ಬುಧವಾರ ಎಚ್‌ಎಸ್‌ಆರ್‌ ಲೇಔಟ್‌ನ ಸಮರ್ಥನಂ ಸೇವಾ ಟ್ರಸ್ಟ್‌ನ ಸುಮಾರು 200 ಮಂದಿ ಮಕ್ಕಳಿಗೆ ಉಚಿತವಾಗಿ ಕ್ಷೌರ ಮಾಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌.­ದೊರೆಸ್ವಾಮಿ, ‘ಹಣವಿದ್ದವರು ಮಾತ್ರ ಸಮಾಜಸೇವೆ ಮಾಡಬಹುದು ಎಂಬ ಧೋರಣೆ ದೂರವಾಗಬೇಕು. ಸವಿತಾ ಸಮಾಜದವರು ವಿಶೇಷ ದಿನಗಳಲ್ಲಿ ಉಚಿತವಾಗಿ ಕ್ಷೌರ ಮಾಡುವ ಮೂಲಕ ಸಮಾಜಸೇವೆ ಮಾಡುತ್ತಾರೆ. ಹೀಗೆ ತಮ್ಮ ಮಿತಿಯಲ್ಲಿ ಸಮಾಜಸೇವೆ ಮಾಡಲು ಎಲ್ಲರಿಗೂ ಅವಕಾಶವಿದೆ’ ಎಂದರು.ಕರ್ನಾಟಕ ರಾಜ್ಯ ಕ್ಷೌರಸೇವಾ ಸವಿತಾ ಸಮಾಜದ ಅಧ್ಯಕ್ಷ ವಿ.ಹರೀಶ್‌, ಸಮಾಜಸೇವಕ ಎಂ.ಲಕ್ಷ್ಮೀನರಸಿಂಹ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry