ವಿಷ ಉಗುಳುವ ಸರ್ಪ

7

ವಿಷ ಉಗುಳುವ ಸರ್ಪ

Published:
Updated:

ಇದಕ್ಕೆ ಉಗುಳುವ ಕಾಳಿಂಗ ಸರ್ಪ ಎಂದೇ ಹೆಸರು. ಏಷ್ಯಾ ಮತ್ತು ಆಫ್ರಿಕಾ ಖಂಡದಲ್ಲಿ ಕಂಡು ಬರುವ ಈ ಉಗುಳುವ ಸರ್ಪಗಳು ಅಪಾಯ ಎದುರಾದಾಗ ಮೂರು ಮೀಟರ್‌ಗಳಷ್ಟು ದೂರಕ್ಕೆ ಗುರಿಯಿಟ್ಟು ವಿಷ ಉಗುಳಬಲ್ಲವು. ಅವುಗಳ ಹಲ್ಲಿನ ಬೇರಿನಲ್ಲಿರುವ ವಿಷವನ್ನು ಶ್ವಾಸಕೋಶದ ಸಹಾಯದಿಂದ ಅವು ಬಲವಾಗಿ ಉಗುಳುತ್ತವೆ. ಅವುಗಳ ಉಗುಳು ವಿಷಪೂರಿತವಾಗಿದ್ದರೂ ಚರ್ಮದ ಮೇಲೆ ಅದು ಬೀಳುವುದರಿಂದ ಸಾವಿಗೀಡಾಗಲು ಸಾಧ್ಯವಿಲ್ಲ. ಅದರಿಂದ ಚರ್ಮಕ್ಕೆ ಅಲರ್ಜಿಯಾಗಬಹುದು. ಆದರೆ ಕಣ್ಣಿಗೆ ಅದರ ವಿಷ ತಾಕಿದರಂತೂ ಶಾಶ್ವತ ಕುರುಡಾಗುವ ಅಪಾಯವಿದೆ. ಉಗುಳುವುದನ್ನು ಹೊರತುಪಡಿಸಿದರೆ ಉಳಿದಂತೆ ಇವು ಸಾಮಾನ್ಯ ಹಾವುಗಳಂತೆ ಜೀವನ ಸಾಗಿಸುತ್ತವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry