ವಿ. ಎಸ್. ಸಂಪತ್: ನೂತನ ಮುಖ್ಯ ಚುನಾವಣಾ ಆಯುಕ್ತ

7

ವಿ. ಎಸ್. ಸಂಪತ್: ನೂತನ ಮುಖ್ಯ ಚುನಾವಣಾ ಆಯುಕ್ತ

Published:
Updated:
ವಿ. ಎಸ್. ಸಂಪತ್: ನೂತನ ಮುಖ್ಯ ಚುನಾವಣಾ ಆಯುಕ್ತ

ನವದೆಹಲಿ (ಪಿಟಿಐ): ಚುನಾವಣಾ ಆಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ವಿ. ಎಸ್. ಸಂಪತ್ ಅವರನ್ನು ನೂತನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.ಈ ತಿಂಗಳ 10ರಂದು ಮುಖ್ಯ ಚುನಾವಣಾ ಆಯುಕ್ತ ಎಸ್. ವೈ ಖುರೇಶಿ ನಿವೃತ್ತಿ ಹೊಂದಲಿದ್ದು, ಅಂದೇ ಸಂಪತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಮುಖ್ಯ ಚುನಾವಣಾ ಆಯುಕ್ತರ ನೇಮಕಕ್ಕೆ ವಿಶೇಷ ನೇಮಕಾತಿ ಸಮಿತಿ ರಚನೆ ಮಾಡಬೇಕು ಎಂಬ ಎಲ್. ಕೆ. ಅಡ್ವಾಣಿ ಅವರ ಸಲಹೆಯನ್ನು ಕಡೆಗಣಿಸಿದ ಸರ್ಕಾರ, 1973ರ ಬ್ಯಾಚ್‌ನ ಆಂಧ್ರಪ್ರದೇಶ ಕೇಡರ್‌ನ ಐಎಎಸ್ ಅಧಿಕಾರಿ ವೀರವಳ್ಳಿ ಸುಂದರಂ ಸಂಪತ್ ಅವರನ್ನು ಮುಖ್ಯ ಚುನಾವಣಾ ಆಯುಕ್ತರನ್ನಾಗಿ ನೇಮಿಸಿ ಆದೇಶ ಹೊರಡಿಸಿದೆ. ಸಂಪತ್ ಅವರು 2015ರ ಜನವರಿವರೆಗೆ ಅಧಿಕಾರದಲ್ಲಿ ಇರುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry