ವೀಡಿಯೋ ವೀಕ್ಷಣಾ ತಂಡ ರಚನೆ

7

ವೀಡಿಯೋ ವೀಕ್ಷಣಾ ತಂಡ ರಚನೆ

Published:
Updated:

ಗುಲ್ಬರ್ಗ: ಕರ್ನಾಟಕ ವಿಧಾನಸಭೆಗೆ ಸಾರ್ವತ್ರಿಕ ಚುನಾವಣೆ 2013ರ ಮೇ 5ರಂದು ನಡೆಯಲಿದೆ. ಭಾರತ ಚುನಾವಣಾ ಆಯೋಗದ ಆದೇಶದಂತೆ ಈ ಚುನಾವಣಾ ಸಂದರ್ಭದಲ್ಲಿ ಸ್ಪರ್ಧಿಸತಕ್ಕಂತಹ ಅಭ್ಯರ್ಥಿಗಳ ಖರ್ಚುವೆಚ್ಚಗಳ ವಿವರಗಳನ್ನು ಕಾಲಕಾಲಕ್ಕೆ ಪರಿಶೀಲಿಸಲು ಲೆಕ್ಕಪತ್ರ ಪರಿಶೀಲನಾ ಸಮಿತಿಯು ನೀಡಿರುವ ವಿವರವನ್ನು ಚಿತ್ರೀಕರಿಸಲು ವೀಡಿಯೋ ವೀಕ್ಷಣಾ ತಂಡ ರಚಿಸಲಾಗಿದೆ.

ಗುಲ್ಬರ್ಗ ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಿಗೆ ಈ ಮುಂದೆ ತೋರಿಸಿದಂತೆ ವೀಡಿಯೋ ಚಿತ್ರೀಕರಣ ತಂಡದ  ನೋಡಲ್ ಅಧಿಕಾರಿಗಳ ವಿವರ ಇಂತಿದೆ. ಗುಲ್ಬರ್ಗ ಉತ್ತರ- ಶಿವಶರಣಪ್ಪ ಬಿಇಓ ಬಿಸಿಯೂಟ ಗುಲ್ಬರ್ಗ. ಗುಲ್ಬರ್ಗ ದಕ್ಷಿಣ-ಡಾ. ಧರ್ಮರಾಜ ಪಿ.ಎಸ್. ಪ್ರೋಜೆಕ್ಟ್ ಡೈರೆಕ್ಟರ್ ಎಆರ್‌ಎಸ್ ಗುಲ್ಬರ್ಗ. ಗುಲ್ಬರ್ಗ ಗ್ರಾಮೀಣ- ಬಿ.ಟಿ. ಪೂಜಾರಿ ಡೀನ್ ಕೃಷಿ ಮಹಾವಿದ್ಯಾಲಯ ಗುಲ್ಬರ್ಗ. ಜೇವರ್ಗಿ-ಡಾ. ಬಾಬಾ ಪಟೇಲ್ ಡಿಡಬ್ಯ್ಲೂಡಿಓ ಜೇವರ್ಗಿ. ಆಳಂದ-ಶಾಂತಪ್ಪ ಟಕ್ಕಳಕಿ ಎಇಇ ಪಿಆರ್‌ಇಡಿ ಗುಲ್ಬರ್ಗ. ಅಫಜಲಪೂರ-ಯೆಂಡಿಗೇರಿ ಎಇಇ, ಎಂ.ಐ ಅಫಜಲಪೂರ.  ಚಿತ್ತಾಪೂರ-ನಂದಕುಮಾರ ಕುಲಕರ್ಣಿ ಎಇಇ ಪಿಆರ್‌ಇಡಿ ಚಿತ್ತಾಪೂರ.   ಸೇಡಂ-ವಿದ್ಯಾಸಾಗರ ಕೋರವಾರ ಎಇಇ ಎಂ.ಐ.ಸೇಡಂ.  ಚಿಂಚೋಳಿ-ಜಾನಕಿಬಾಯಿ ಬಿ. ಸಹಾಯಕ ನಿರ್ದೇಶಕರು ಕೃಷಿ ಇಲಾಖೆ .

ಈ ಸಮಿತಿಯ ಸದಸ್ಯರ ತಂಡವು ಸಲ್ಲಿಸಿದ ವಿಡೀಯೋ ಚಿತ್ರಣವನ್ನು ಅದೇ ದಿವಸ ವೀಕ್ಷಿಸಿ ಚುನಾವಣಾ ವೆಚ್ಚಕ್ಕೆ ಸಂಬಂಧಿಸಿದ ವಿಷಯಗಳನ್ನು ಅಕೌಂಟಿಂಗ್ ತಂಡಕ್ಕೆ ಹಾಗೂ ಸಹಾಯಕ ಲೆಕ್ಕ ವೀಕ್ಷಕರಿಗೆ ಮತ್ತು ನೀತಿ ಸಂಹಿತೆಗೆ ಸಂಬಂಧಿಸಿದ ವಿಷಯಗಳನ್ನು ಚುನಾವಣಾ ವೀಕ್ಷಕರಿಗೆ ಮತ್ತು ಚುನಾವಣಾಧಿಕಾರಿಗಳಿಗೆ ಅದೇ ದಿವಸ ವರದಿ ಸಲ್ಲಿಸುವುದು ಹಾಗೂ ಜಿಲಾ ್ಲಚುನಾವಣಧಿಕಾರಿಗಳು ಗುಲ್ಬರ್ಗ ಮತ್ತು ಚುನಾವಣಾಧಿಕಾರಿಗಳು ಕಾಲಕಾಲಕ್ಕೆ ನೀಡುವ ನಿರ್ದೇಶನಗಳನ್ವಯ ಕಾರ್ಯನಿರ್ವಹಿಸಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry