ವೀಣಾ ಮಲ್ಲಿಕ್ ಗರಂ

7

ವೀಣಾ ಮಲ್ಲಿಕ್ ಗರಂ

Published:
Updated:
ವೀಣಾ ಮಲ್ಲಿಕ್ ಗರಂ

ಇತ್ತೀಚೆಗಷ್ಟೇ ಮದುವೆಯಾದ ಪಾಕಿಸ್ತಾನಿ ನಟಿ ವೀಣಾ ಮಲ್ಲಿಕ್‌ ನೆಮ್ಮದಿಯ ವೈವಾಹಿಕ ಜೀವನ ಆರಂಭಿಸುವ ಮೊದಲೇ ಮಾಜಿ ಗೆಳೆಯನ ಕಾಟ ಶುರುವಾಗಿದೆ. ಪ್ರಶಾಂತ್‌ ಪ್ರತಾಪ್‌ ಸಿಂಗ್‌ ಎಂಬ ಮಾಜಿ ಗೆಳೆಯ ಈಗ ನ್ಯಾಯಾಲಯದ ಮೆಟ್ಟಿಲೇರುವ ಬೆದರಿಕೆ ಒಡ್ಡಿರುವುದು ವೀಣಾ ಅವರ ಸುಖ ನಿದ್ದೆ ಕೆಡಿಸಿದೆಯಂತೆ.ಮುಂಬೈನಲ್ಲಿ ಡಿಜಿಟಲ್‌ ಕಂಪೆನಿಯೊಂದನ್ನು ಹೊಂದಿರುವ ಪ್ರಶಾಂತ್‌ ಅವರ ಪ್ರಕಾರ, ತಮಗೆ ಒಂದು ಮಾತನ್ನೂ ಹೇಳದೇ ವೀಣಾ ದುಬೈ ಮೂಲದ ವ್ಯಾಪಾರಿ ಆಜಾದ್‌ ಎಂಬವರನ್ನು ಮದುವೆಯಾಗಿದ್ದಾರೆ. ವೀಣಾ ಮದುವೆಯಾದ ಸುದ್ದಿ ಮಾಧ್ಯಮಗಳಲ್ಲಿ ವರದಿಯಾದ ಬಳಿಕ ಪ್ರಶಾಂತ್‌ ಅವರು ನವದಂಪತಿಗೆ ಶುಭ ಕೋರಿ ಕಳುಹಿಸಿದ ಸಂದೇಶದಿಂದ ತಮ್ಮ ಹಳೆಯ ಸಂಬಂಧ ಬಹಿರಂಗವಾಗಬಹುದೆಂಬ ಭಯ ವೀಣಾಗೆ ಕಾಡಿತ್ತಂತೆ.ಆದರೆ ಈಗ ಈ ಇಬ್ಬರೂ ಪರಸ್ಪರ ಆರೋಪ, ಪ್ರತ್ಯಾರೋಪದ ಕೆಸರೆರಚಾಟದಲ್ಲಿ ನಿರತರಾಗಿದ್ದಾರೆ. ‘ಪ್ರಶಾಂತ್‌ ಒಬ್ಬ ಸಲಿಂಗಕಾಮಿಯಾಗಿದ್ದ’ ಎಂದು ವೀಣಾ ದೂರಿದ್ದಾರೆ. ಈ ಹೇಳಿಕೆಯ ಬೆನ್ನಲ್ಲೇ ತಾನು ಹಾಗೂ ವೀಣಾ ಜತೆಗಿರುವ ಚಿತ್ರವನ್ನು ಪ್ರಶಾಂತ್‌ ಬಿಡುಗಡೆ ಮಾಡಿದ್ದಾರೆ. ತನ್ನೊಂದಿಗೆ ಸಂಬಂಧ ಹೊಂದಿದ್ದಾಗಲೂ ವೀಣಾ ಬೇರೆ ಪುರುಷರೊಂದಿಗೆ ಇರುತ್ತಿದ್ದರು ಎಂದು ಪ್ರಶಾಂತ್‌ ದೂರಿದ್ದಾರೆ.ಇದಕ್ಕೆ ಪ್ರತಿಕ್ರಿಯಿಸಿರುವ ವೀಣಾ, ‘ಆತ ಒಬ್ಬ ಕುರೂಪಿ. ನಾನು ಆತನನ್ನು ನನ್ನ ಚಾಲಕ ಹಾಗೂ ಸೇವಕನನ್ನಾಗಿ ನೇಮಿಸಿಕೊಂಡಿದ್ದೆ. ನನ್ನನ್ನು ಸುತ್ತಾಡಿಸುವುದು, ಕಾಲಿಗೆ ಪಾದರಕ್ಷೆ ಧರಿಸಲು ಸಹಕರಿಸುವುದು, ನನ್ನ ಬಿಲ್‌ಗಳನ್ನು ಪಾವತಿಸುವುದು, ಚಿತ್ರೀಕರಣದ ಸ್ಥಳದಲ್ಲಿ ಸಹಕರಿಸುವುದಕ್ಕಷ್ಟೇ ಆತನನ್ನು ಸೀಮಿತಗೊಳಿಸಿದ್ದೆ’ ಎಂದು ವೀಣಾ ಹೇಳಿದ್ದಾರೆ.ಈ ನಡುವೆ ತನ್ನ ತಾಯಿಗೆ ವೀಣಾ ಮಲ್ಲಿಕ್‌ ಬೆದರಿಕೆ ಒಡ್ಡಿದ್ದಾರೆ ಎಂದು ಪ್ರಶಾಂತ್‌ ದೂರಿದ್ದಾರೆ. ಇದಕ್ಕಾಗಿ ಆಕೆ ಕ್ಷಮೆ ಕೋರಬೇಕು ಹಾಗೂ ತಾನು ನೀಡಿದ 1.5 ಕೋಟಿ ರೂಪಾಯಿ ಹಣವನ್ನು ಹಿಂದಿರುಗಿಸಬೇಕು. ಜತೆಗೆ ತಾನು ನೀಡಿದ ಐಪ್ಯಾಡ್‌,  ಕ್ಯಾಮೆರಾಗಳನ್ನು ವಾಪಸ್ ಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry