ವೀಣಾ ಮಲ್ಲಿಕ್ ನಿದ್ದೆಗೆ ಸಮಯವಿಲ್ಲ!

7

ವೀಣಾ ಮಲ್ಲಿಕ್ ನಿದ್ದೆಗೆ ಸಮಯವಿಲ್ಲ!

Published:
Updated:

ಪಾಕ್ ಮೂಲದ ನಟಿ ವೀಣಾ ಮಲ್ಲಿಕ್‌ಗೆ ಸದ್ಯ ನಿದ್ದೆ ಮಾಡಲೂ ಸಮಯವಿಲ್ಲವಂತೆ. ಒಂದರ ನಂತರ ಒಂದರಂತೆ ಆರು ಚಿತ್ರಗಳು ಬಿಡುಗಡೆಗೆ ಸಾಲುಗಟ್ಟುವಂತೆ ಚಿತ್ರೀಕರಣದಲ್ಲಿ ನಿರತರಾಗಿರುವುದೇ ಇದಕ್ಕೆ ಕಾರಣ ಎಂದು ವೀಣಾ ಹೇಳಿದ್ದಾರೆ.ಪಂಜಾಬಿ ಚಿತ್ರ `ಜಟ್ಸ್ ಗೋಲ್‌ಮಾಲ್' ಚಿತ್ರದ ಮೂಲಕ ಆರ್ಯನ್ ಬಬ್ಬರ್‌ಗೆ ಜೊತೆಯಾಗಿ ಪಂಜಾಬಿ ಚಿತ್ರಲೋಕವನ್ನು ಪ್ರವೇಶಿಸುತ್ತಿದ್ದಾರೆ. ಹಿಂದಿ ಚಿತ್ರದಲ್ಲೂ ಬಬ್ಬರ್ ಜೊತೆಯಲ್ಲಿಯೇ `ಜಿಂದಗಿ 50-50'ಯಲ್ಲಿ ನಟಿಸುತ್ತಿದ್ದಾರೆ. ಬಿಗ್‌ಬಾಸ್ ರಿಯಾಲಿಟಿ ಶೋದಲ್ಲಿ ಸ್ನೇಹಿತರಾಗಿದ್ದ ಅಶ್ಮಿತ್ ಪಟೇಲ್ ಜೊತೆಗೆ `ಸೂಪರ್ ಮಾಡೆಲ್' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 3ಡಿಯಲ್ಲಿ ಬರಲಿರುವ ಮುಂಬೈ 125 ಕಿ.ಮೀ. ಎಂಬ ಥ್ರಿಲ್ಲರ್ ಚಿತ್ರದ ಚಿತ್ರೀಕರಣವೂ ನಡೆದಿದೆ. ಈ ಚಿತ್ರಗಳೂ ಸೇರಿದಂತೆ ಒಟ್ಟು 6 ಚಿತ್ರಗಳು 2013ರಲ್ಲಿ ತೆರೆಗೆ ಬರಲಿವೆ.ಅಲ್ಪಾವಧಿಯಲ್ಲಿಯೇ ಇಷ್ಟೊಂದು ಅವಕಾಶಗಳು ಭಾರತದಲ್ಲಿ ದೊರೆತಿರುವುದು ಅದೃಷ್ಟ. ಭಾರತೀಯರ ಅಭಿಮಾನಕ್ಕೆ ಮೂಕಳಾಗಿದ್ದೇನೆ. ಅಭಾರಿಯಾಗಿದ್ದೇನೆ ಎಂದು ಭಾವುಕರಾಗಿ ನುಡಿದಿದ್ದಾರೆ ವೀಣಾ.ಭಾರತ ಹಾಗೂ ಪಾಕಿಸ್ತಾನೀಯರ ಎರಡು ಪ್ರಮುಖ ಆಕರ್ಷಣೆ ಎಂದರೆ ಒಂದು ಕ್ರಿಕೆಟ್, ಇನ್ನೊಂದು ಸಿನಿಮಾ. ನಾನು ಕ್ರಿಕೆಟ್ ಅಭಿಮಾನಿಯೂ ಹೌದು. ಸಿನಿಮಾ ನಟಿಯೂ ಹೌದು. ಕೇವಲ ಕಲೆ ಹಾಗೂ ಕ್ರೀಡೆ ಮಾತ್ರ ಎರಡೂ ದೇಶಗಳ ನಡುವಿನ ಕಹಿಯನ್ನು ನೀಗಿಸಬಲ್ಲದು ಎಂಬುದು ಅವರ ಅಭಿಪ್ರಾಯವಾಗಿದೆ.      

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry