ವೀರಜ್ಯೋತಿಗೆ ಸಂಭ್ರಮದ ಸ್ವಾಗತ

7

ವೀರಜ್ಯೋತಿಗೆ ಸಂಭ್ರಮದ ಸ್ವಾಗತ

Published:
Updated:
ವೀರಜ್ಯೋತಿಗೆ ಸಂಭ್ರಮದ ಸ್ವಾಗತ

ಬೆಳಗಾವಿ: ಕಿತ್ತೂರ ಉತ್ಸವದ ಅಂಗವಾಗಿ ಹೊರಟಿರುವ ವೀರರಾಣಿ ಕಿತ್ತೂರ  ಚೆನ್ನಮ್ಮೋಜಿಯ ವಿಜಯೋತ್ಸವದ ವೀರಜ್ಯೋತಿಗೆ ಬೆಳಗಾವಿಯಲ್ಲಿ ಬುಧವಾರ ಸಂಭ್ರಮದ ಸ್ವಾಗತ ನೀಡಲಾಯಿತು.ಖಾನಾಪುರದಿಂದ ಹೊರಟ ವೀರಜ್ಯೋತಿಯು ಇಂದು ಮುಂಜಾನೆ ನಗರದ ರೈಲ್ವೆ ನಿಲ್ದಾಣದ ಹತ್ತಿರ ಬಂದಾಗ ಲೋಕಸಭಾ ಸದಸ್ಯ ಸುರೇಶ ಅಂಗಡಿ ವೀರಜ್ಯೋತಿಗೆ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿದರು.ಸಂಸದ ಸುರೇಶ ಅಂಗಡಿ ಮಾತನಾಡಿ, ಬ್ರಿಟಿಷ್‌ರ ವಿರುದ್ಧ ಕೆಚ್ಚದೆಯಿಂದದ ಹೋರಾಡಿ ಸ್ವಾತಂತ್ರ್ಯದ ಕಿಡಿ ಹೊತ್ತಿಸಿ ಯುದ್ಧವನ್ನು ಗೆದ್ದ ಸ್ಮರಣಾರ್ಥವಾಗಿ ಆಚರಿಸಲಾಗುತ್ತಿರುವ ವೀರರಾಣಿ ಚನ್ನಮ್ಮನ ಕತ್ತೂರು ಉತ್ಸವವನ್ನು ಅದ್ಧೂರಿಯಿಂದ ಆಚರಿಸಬೇಕು. ಮೈಸೂರು ದಸರಾ ಉತ್ಸವದಂತೆ ಕಿತ್ತೂರು ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಬೇಕು ಎಂದು ಆಗ್ರಹಿಸಿದರು.ಅನೇಕ ಗಣ್ಯರು ಹಾಗೂ ಅಧಿಕಾರಿಗಳು ವೀರ ಜ್ಯೋತಿಗೆ ಸ್ವಾಗತ ಕೋರಿದರು. ವಿಜಯೋತ್ಸವ ಜ್ಯೋತಿ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕಾಕತಿಗೆ ಪ್ರಯಾಣ ಬೆಳೆಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry