ವೀರಣ್ಣ ಮಡಿವಾಳರಿಗೆ ಯುವ ಪುರಸ್ಕಾರ

7

ವೀರಣ್ಣ ಮಡಿವಾಳರಿಗೆ ಯುವ ಪುರಸ್ಕಾರ

Published:
Updated:

ಬೆಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿಯ `ಯುವ ಪುರಸ್ಕಾರ~ ಪ್ರಶಸ್ತಿ ಕವಿ ವೀರಣ್ಣ ಮಡಿವಾಳ ಅವರಿಗೆ ದೊರೆತಿದೆ. ಐವತ್ತು ಸಾವಿರ ರೂಪಾಯಿ ನಗದು ಹಾಗೂ ತಾಮ್ರ ಫಲಕವನ್ನು ಒಳಗೊಂಡಿರುವ ಈ ಪುರಸ್ಕಾರವನ್ನು ಪ್ರಸಕ್ತ ಸಾಲಿನಿಂದ 35 ವರ್ಷದೊಳಗಿನ ಬರಹಗಾರರಿಗೆ ಅಕಾಡೆಮಿ ನೀಡುತ್ತಿದೆ.ವೃತ್ತಿಯಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿರುವ ವೀರಣ್ಣ, ಚಿಕ್ಕೋಡಿ ತಾಲ್ಲೂಕಿನ ಗಾವಡ್ಯಾನವಾಡಿಯ ತೋಟದ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. `ನೆಲದ ಕರುಣೆಯ ದನಿ~ ಅವರ ಚೊಚ್ಚಿಲ ಕವನ ಸಂಕಲನ. ಅರಳು ಪ್ರಶಸ್ತಿ, ಬೇಂದ್ರೆ ಪುಸ್ತಕ ಪ್ರಶಸ್ತಿ, ಸಾಂಬಶಿವಪ್ಪ ದತ್ತಿನಿಧಿ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳನ್ನು ಈ ಸಂಕಲನ ಪಡೆದಿದೆ. ಸಂಕಲನದ ಶೀರ್ಷಿಕೆಯಾದ `ನೆಲದ ಕರುಣೆಯ ದನಿ~ ಕವಿತೆ `ಪ್ರಜಾವಾಣಿ ದೀಪಾವಳಿ ಕಾವ್ಯಸ್ಪರ್ಧೆ-2009~ರಲ್ಲಿ ಪ್ರಥಮ ಬಹುಮಾನ ಪಡೆದಿತ್ತು.ಕೇಂದ್ರ ಸಾಹಿತ್ಯ ಅಕಾಡೆಮಿಯ ಚೊಚ್ಚಿಲ ಯುವ ಪುರಸ್ಕಾರಕ್ಕೆ ಪಾತ್ರವಾಗಿರುವ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ವೀರಣ್ಣ, `ಕನ್ನಡ ಕಾವ್ಯವನ್ನು ಹೆಚ್ಚು ಮಾನವೀಯಗೊಳಿಸಿದ ಕವಿಗಳಾದ ದಿವಂಗತ ಎನ್.ಕೆ.ಹನುಮಂತಯ್ಯ, ವಿಭಾ ತಿರಕಪಡಿ ಅವರಿಗೆ ಹಾಗೂ ತಮ್ಮ ಶಾಲೆಯ ಮಕ್ಕಳಿಗೆ ಈ ಪ್ರಶಸ್ತಿ ಅರ್ಪಣೆ~ ಎಂದು ಪ್ರತಿಕ್ರಿಯಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry