ವೀರಭದ್ರಸಿಂಗ್‌ನಾಳೆ ಪ್ರಮಾಣ

7

ವೀರಭದ್ರಸಿಂಗ್‌ನಾಳೆ ಪ್ರಮಾಣ

Published:
Updated:

ಶಿಮ್ಲಾ (ಪಿಟಿಐ): ಕಾಂಗ್ರೆಸ್‌ನ ಹಿರಿಯ ನಾಯಕ ವೀರಭದ್ರ ಸಿಂಗ್ ಅವರು ಹಿಮಾಚಲ ಪ್ರದೇಶದ ನೂತನ ಮುಖ್ಯಮಂತ್ರಿವಾಗಿ ಇದೇ 25ರಂದು (ಮಂಗಳವಾರ) ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.ವೀರಭದ್ರ ಸಿಂಗ್ ರಾಜ್ಯದ ಚುಕ್ಕಾಣಿ ಹಿಡಿಯುತ್ತಿರುವುದು ಇದು ಆರನೇ ಬಾರಿಯಾಗಿದೆ. ಅವರು ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಸರ್ಕಾರ ರಚಿಸುವಂತೆ ರಾಜ್ಯಪಾಲರಾದ ಊರ್ಮಿಳಾ ಸಿಂಗ್ ಅವರು 78 ವರ್ಷದ  ಸಿಂಗ್ ಅವರಿಗೆ ಆಹ್ವಾನ ನೀಡ್ದ್ದಿದಾರೆ.  ಮೊದಲು ಸಿಂಗ್ ಪ್ರಮಾಣ ವಚನ ಸ್ವೀಕರಿಸಲಿದ್ದು, ನಂತರ ಪಕ್ಷದ ವರಿಷ್ಠರ ಜೊತೆ ಚರ್ಚಿಸಿ ಸಂಪುಟ ರಚಿಸಲಿದ್ದಾರೆ.ವೀರಭದ್ರ ಸಿಂಗ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಶನಿವಾರ ಅಧಿಕೃತ ಆಯ್ಕೆ ಮಾಡಲಾಗಿತ್ತು.  ಒಟ್ಟು 68 ಸ್ಥಾನ ಬಲದ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಕಾಂಗ್ರೆಸ್ 36 ಸದಸ್ಯ ಬಲವನ್ನು ಹೊಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry