ವೀರಶೈವ ಧರ್ಮದಲ್ಲಿ ತತ್ವವೇ ಪ್ರಧಾನ

7

ವೀರಶೈವ ಧರ್ಮದಲ್ಲಿ ತತ್ವವೇ ಪ್ರಧಾನ

Published:
Updated:

ಬೆಂಗಳೂರು: `ಸಂವೇದನಾಶೀಲ ಸಂಸ್ಕೃತಿ ಹೊಂದಿರುವ ವೀರಶೈವ ಧರ್ಮವು ವ್ಯಕ್ತಿ ಪ್ರಧಾನವಾಗಿರದೇ ತತ್ವ ಪ್ರಧಾನವಾಗಿದೆ~ ಎಂದು ಬಾಳೆಹೊನ್ನೂರು ರಂಭಾಪುರಿ ಮಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಮಠವು ನಗರದಲ್ಲಿ ಹಮ್ಮಿಕೊಂಡಿರುವ ಶರನ್ನವರಾತ್ರಿ ದಸರಾ ಮಹೋತ್ಸವ ಮತ್ತು ಧರ್ಮ ಜನಜಾಗೃತಿ ಸಭೆಯಲ್ಲಿ ಮಂಗಳವಾರ ಆಶೀರ್ವಚನ ನೀಡಿ ಅವರು ಮಾತನಾಡಿದರು.`ವೀರಶೈವ ಧರ್ಮವು ವಿದ್ಯೆ, ವಿವೇಕ, ವಿಮರ್ಶೆ, ವಿನಯ, ವಿವೇಚನೆಯ ತವರು ಮನೆ ಇದ್ದಂತೆ. ಮನುಷ್ಯ ಎಷ್ಟು ವರ್ಷ ಬಾಳಿದನೆಂಬುದು ಮುಖ್ಯವಲ್ಲ. ಬದುಕಿದ್ದಾಗ ಯಾವ ರೀತಿ ಬಾಳಿದನೆಂಬುದು ಮುಖ್ಯ. ಸಮಾಜದ ಓರೆ ಕೋರೆಗಳನ್ನು ತಿದ್ದಿ, ಸಾತ್ವಿಕ ಜನಸಮುದಾಯವನ್ನು ರೂಪಿಸುವುದೇ ಗುರುವಿನ ನಿಜವಾದ ಧರ್ಮ. ಸ್ವಧರ್ಮ ನಿಷ್ಠೆ, ಪರಧರ್ಮ ಸಹಿಷ್ಣುತೆ ಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು~ ಎಂದು ಸ್ವಾಮೀಜಿ ಕರೆ ನೀಡಿದರು.`ರಂಭಾಪುರಿ ಬೆಳಗು~ ಕೃತಿ ಬಿಡುಗಡೆ ಮಾಡಿದ ದಸರಾ ಧರ್ಮ ಸಮ್ಮೇಳನದ ಅಧ್ಯಕ್ಷರಾದ ಸಚಿವ ವಿ.ಸೋಮಣ್ಣ, `ಸ್ವಾಮೀಜಿ ಅವರ ದರ್ಶನಕ್ಕಾಗಿ ನೆರೆಯ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ರಾಜ್ಯಗಳಿಂದ ಸಾಕಷ್ಟು ಭಕ್ತರು ಆಗಮಿಸಿರುವುದು ಸಂತಸ ತಂದಿದೆ~ ಎಂದರು.`ದೇಶದ ಪ್ರಸ್ತುತ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಸ್ವಾಮೀಜಿ ಅವರು ನೀಡಿರುವ ಸಂದೇಶ ನೊಂದ ಜನತೆಗೆ ಸಾಂತ್ವನ ನೀಡಿದೆ~ ಎಂದು ಅವರು ಹೇಳಿದರು.ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲೇಪುರಂ ಜಿ. ವೆಂಕಟೇಶ್ ಅವರು  `ಸಿದ್ಧಾಂತ ಶಿಖಾಮಣಿ~ ಕುರಿತು ಉಪನ್ಯಾಸ ನೀಡಿದರು.ಷಡಕ್ಷರಿ ಮಠದ ರುದ್ರಮುನಿ ಸ್ವಾಮೀಜಿ, `ಕಾಯಕ ಮತ್ತು ದಾಸೋಹ~ ಕುರಿತಂತೆ ಉಪನ್ಯಾಸ ನೀಡಿದರು.

ಇದೇ ಸಂದರ್ಭದಲ್ಲಿ ಚಿಕ್ಕಮಗಳೂರಿನ ಗೌರಮ್ಮ ಬಸವೇಗೌಡ ಅವರನ್ನು ಸನ್ಮಾನಿಸಲಾಯಿತು.ಬಿಳಕಿಯ ರಾಚೋಟೇಶ್ವರ ಶಿವಾಚಾರ್ಯರು, ಮಾಜಿ ಶಾಸಕ ಜ್ಞಾನದೇವ ದೊಡ್ಡಮೇಟಿ, ಪ್ರೊ.ಎಂ.ಎಸ್. ಪ್ರಸನ್ನ ಕುಮಾರ್ ಮಧುರೆ, ಪ್ರೇಮಾ ಸೋಮಸುಂದರ್, ತಿಮ್ಮೇಗೌಡ, ಪಾಲಿಕೆ ಮಾಜಿ ಸದಸ್ಯರಾದ ಎಂ.ಬಿ.ಶಿವಪ್ಪ, ಜಿ.ಶ್ರೀನಿವಾಸ್, ಸಮಾಜ ಸೇವಕ ಸಚ್ಚಿದಾನಂದ, ಆರ್.ಚಂದ್ರಶೇಖರಯ್ಯ, ಡಾ. ಪ್ರಭುಸ್ವಾಮಿ ಮತ್ತು ರಾಜ್ಯ ಕೊಳೆಗೇರಿ ಅಭಿವೃದ್ಧಿ ಮಂಡಳಿದ ಸದಸ್ಯ ಎಚ್. ಕೋದಂಡರಾಮ ಅವರನ್ನು ಅಭಿನಂದಿಸಲಾಯಿತು.ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ರಾಮಚಂದ್ರಗೌಡ, ಸಂಸದರಾದ ಸುರೇಶ್ ಅಂಗಡಿ, ಪ್ರಭಾಕರ ಕೋರೆ, ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ, ಅಬ್ದುಲ್ ಅಜೀಂ, ಸುಬ್ಬ ನರಸಿಂಹ, ಮಾಜಿ ಮೇಯರ್ ಜೆ.ಹುಚ್ಚಪ್ಪ, ಬಿಬಿಎಂಪಿ ಸದಸ್ಯರಾದ ರೂಪಾದೇವಿ, ಮಂಜುನಾಥ್, ಎಚ್.ಎಸ್.ರಾಜೇಶ್ವರಿ, ಗಾಯಕ ರಾಜೇಶ್ ಕಷ್ಣನ್ ಉಪಸ್ಥಿತರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry