ವೀರಶೈವ ಪಂಚಮಸಾಲಿ ಸಂಘದ ಸಭೆ

7

ವೀರಶೈವ ಪಂಚಮಸಾಲಿ ಸಂಘದ ಸಭೆ

Published:
Updated:

ಶಹಾಪುರ: ಪಂಚಮ ಸಾಲಿ ಸಂಘದ ಪ್ರಥಮ ಸಭೆಯನ್ನು ಈಚೆಗೆ ಪಟ್ಟಣದಲ್ಲಿ ಕರೆಯಲಾಗಿತ್ತು. ಸಭೆಯಲ್ಲಿ ಹೊನ್ನಪ್ಪ ಹೊಸೂರ ಸಮಾಜದ ಹಿರಿಯ ಸದಸ್ಯ ದೇವಿಂದ್ರಪ್ಪ ತೋಟಿಗೇರಿಗೆ ಸಮಾಜದ ಧ್ವಜ ಹಾಗೂ ಜಗದ್ಗುರು ಭಾವಚಿತ್ರವನ್ನು ನೀಡುವ ಮೂಲಕ ತಾಲ್ಲೂಕು ವೀರಶೈವ ಪಂಚಮಶಾಲಿ ಸಂಘದ ಅಧ್ಯಕ್ಷರನ್ನಾಗಿ ಸರ್ವಾನುಮತದಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

 

ಸಂಘದ ಸ್ಥಾಪನೆಯ ಮುಖ್ಯ ಉದ್ದೆೀಶ ಸಮಾಜದ ಸರ್ವರ ಏಳಿಗೆಯೇ ಅದಕ್ಕೆ ಮುಖ್ಯವಾಗಿರುತ್ತದೆ. ಬಡವ ಬಲ್ಲಿದ ಎಂಬ ವ್ಯತ್ಯಾಸಕ್ಕೆ ಎಡೆಗೊಡದೆ ಎಲ್ಲರನ್ನು ಸಮಾಜದ ಮುಖ್ಯ ವಾಹಿನಿಗೆ ತರುವುದೇ ನನ್ನ ಜವಾಬ್ದಾರಿ ಎಂದು ತಾಲೂಕು ಪಂಚಮಸಾಲಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ದೇವಿಂದ್ರಪ್ಪ ತೋಟಿಗೆರ ಹೇಳಿದರು.ಸಭೆಯಲ್ಲಿ ಧೂಳಪ್ಪ ಸಾಹು ಕಡಗುಡ, ಭೀಮರಾಯ ಗೋಡೆಕಾರ,ಶಾಂತಗೌಡ ದಿಗ್ಗಿ, ಅಶೋಕ ದಿನ್ನಿ, ಸುಭಾಶ ಧೂಳಾ, ಸಾಹೇಬಗೌಡ ಗೋಗಿ, ಪಂಪಣ್ಣಗೌಡ ಮಳಗ, ಗುರಣ್ಣ ಶಿರವಾಳ, ದೇವಿಂದ್ರಪ್ಪ ಶಿರವಾಳ, ಶರಣು ಬೇವಿನಹಳ್ಳಿ, ಸಂಗಣ್ಣ ಸಾಹು ಪ್ಯಾಟಿ, ದೇವಿಂದ್ರಪ್ಪ ಹಳಿಸಗರ, ಉಳುವೇಶ ಹಳಿಸಗರ, ಬಸವರಾಜ ತೋಟಿಗೇರ, ಶರಣು ಮೂಲಿಮನಿ, ಮಹಾಂತೇಶ ಬೇವಿನಳ್ಳಿ ಮಲು ಟೊಕಾಪುರ,ಮಲಿಕ್ಲಾರ್ಜುನ ಹೊಸೂರ, ರಮೇಶ ಸಾಹು ಹೊಸೂರು, ಸಂಗಣ್ಣ ಶಿರವಾಳ, ಶಂಕರ ಕಡಗುಡ, ಶಿವು ಮದ್ರಿಕಿ ಇದ್ದರು. ಮಲ್ಲಿಕಾರ್ಜುನ ಅವಂಟಿ ನಿರೂಪಿಸಿದರು. ಮಹಾದೇವಪ್ಪ ಸಾಹು ಸಾಸನೂರ ವಂದಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry