ವೀರಶೈವ ಮಹಾಸಭಾಕ್ಕೆ ರಾಮನಗೌಡರ, ಕುಂಬಾರ ಆಯ್ಕೆ

ಬುಧವಾರ, ಜೂಲೈ 17, 2019
25 °C

ವೀರಶೈವ ಮಹಾಸಭಾಕ್ಕೆ ರಾಮನಗೌಡರ, ಕುಂಬಾರ ಆಯ್ಕೆ

Published:
Updated:

ಧಾರವಾಡ: ಅಖಿಲ ಭಾರತ ವೀರಶೈವ ಮಹಾಸಭಾದ ಧಾರವಾಡ ಕೇಂದ್ರ ಸಮಿತಿ ಮತ್ತು ಕಾರ್ಯಕಾರಿ ಸಮಿತಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಡಾ.ಎಸ್.ಆರ್. ರಾಮನಗೌಡರ ಹಾಗೂ ಎಂ.ಜಿ. ಕುಂಬಾರ ಆಯ್ಕೆಯಾದರು.ಕಾರ್ಯಕಾರಿ ಸಮಿತಿಗೆ ಸ್ಪರ್ಧಿಸಿದ್ದ ಡಾ.ಎಸ್.ಆರ್.ರಾಮನಗೌಡರ 135 ಮತ ಪಡೆವ ಮೂಲಕ ಗೆಲುವು ಪಡೆದರು. ಉಳಿದ ಸ್ಪರ್ಧಿಗಳಾದ ಚಂಬಣ್ಣ ಹುಬ್ಬಳ್ಳಿ ಕೇವಲ ಒಂದು ಮತ ಮತ್ತು ವಿ.ಎಸ್.ಪಾಟೀಲ್ 13 ಮತ ಪಡೆದು ಸೋಲು ಅನುಭವಿಸಿದರು. ಒಟ್ಟು 153 ಚಲಾವಣೆಯಾಗಿದ್ದು, ನಾಲ್ಕು ಮತಗಳು ತಿರಸ್ಕೃತವಾದವು.ಕೇಂದ್ರ ಸಮಿತಿಗೆ ನಡೆದ ಚುನಾವಣೆಯಲ್ಲಿ ಎಂ.ಜಿ.ಕುಂಬಾರ 121 ಮತಗಳನ್ನು ಪಡೆದು ಆಯ್ಕೆಯಾದರು. ಪ್ರತಿಸ್ಪರ್ಧಿ ಸಿ.ಬಿ.ಯಲಿಗಾರ 31 ಮತ ಪಡೆದು ಸೋಲು ಅನುಭವಿಸಿದರು.ಸಹಕಾರಿ ಸಂಘಗಳ ಉಪ ನಿಬಂಧಕ ವೀರಣ್ಣ ಯಳಲ್ಲಿ ಅವರು ಚುನಾವಣಾ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು. ಮಾಜಿ ಶಾಸಕ ಶಿವಾನಂದ ಅಂಬಡಗಟ್ಟಿ, ಜಿ.ಜಿ.ದೊಡವಾಡ, ಗುರುರಾಜ ಹುಣಸಿಮರದ ಇತರ ಮುಖಂಡರು ಈ ಸಂದರ್ಭದಲ್ಲಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry