ವೀರಾಂಜನೇಯ ಸ್ವಾಮಿ ವಾರ್ಷಿಕೋತ್ಸವ

7

ವೀರಾಂಜನೇಯ ಸ್ವಾಮಿ ವಾರ್ಷಿಕೋತ್ಸವ

Published:
Updated:

ತ್ಯಾವಣಿಗೆ: ವೀರಾಂಜನೇಯ ಸ್ವಾಮಿ ದೇವಸ್ಥಾನದ ಮುಖಮಂಟಪ, ವಿಮಾನ ಗೋಪುರ, ಗರುಡ ಕಂಬದ ಪುನರಾವರ್ತನ ಜೀರ್ಣೋದ್ಧಾರ ಪ್ರತಿಷ್ಠಾಪನೆಯ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.ಬೆಳಿಗ್ಗೆಯಿಂದ ಆರಂಭವಾದ ದೇವರ ಕಾರ್ಯಕ್ರಮಗಳಲ್ಲಿ ಗಣಪತಿ ಪೂಜೆ, ಪುಣ್ಯಾಹ, ಸಹಾಸಂಕಲ್ಪ, ಪಂಚಗವ್ಯ ಪೂಜೆ, ಕಳಸ ಸ್ಥಾಪನೆ, ವೇದಿಕಾರ್ಚನೆ, ಅಗ್ನಿ ಪ್ರತಿಷ್ಠಾಪನೆ, ಅಭಿಷೇಕ, ವಾಯುಸ್ತುತಿ, ಮೂಲ ಮಹಾಮಂತ್ರ ಹೋಮ, ಗಣಪತಿ ಹೋಮ, ನವಗ್ರಹ ಹೋಮ, ವಾರ್ಷಿಕೋತ್ಸವ ಶಾಂತಿ ಹೋಮ, ಪೂರ್ಣಾಹುತಿ ಕುಂಭ, ಕುಂಭಾಭಿಷೇಕ, ಅಲಂಕಾರ, ಅರ್ಚನೆ, ಮಹಾ ಮಂಗಳಾರತಿ, ಅಷ್ಠಾವದಾನ ಸೇವೆಗಳನ್ನು ನಡೆಸಿ, ಭಾಗವಹಿಸಿದ ಭಕ್ತರಿಗೆ ತೀರ್ಥ ಮತ್ತು ಪ್ರಸಾದ ವಿನಿಯೋಗ ಕಾರ್ಯಕ್ರಮ ನಡೆಯಿತು. ಬೆಂಗಳೂರಿನ ದೀಕ್ಷಿತ್ ಮತ್ತು ತಂಡದವರ ಪುರೋಹಿತ್ಯ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry