ವೀರೂ ಕೈಬಿಟ್ಟಿದ್ದು ತಂಡದ ನಿರ್ಧಾರ

7

ವೀರೂ ಕೈಬಿಟ್ಟಿದ್ದು ತಂಡದ ನಿರ್ಧಾರ

Published:
Updated:

ಮೆಲ್ಬರ್ನ್ (ಪಿಟಿಐ): ಆಸ್ಟ್ರೇಲಿಯಾ ವಿರುದ್ಧ ಭಾನುವಾರ ನಡೆದ ತ್ರಿಕೋನ ಏಕದಿನ ಕ್ರಿಕೆಟ್ ಸರಣಿಯ ಮೊದಲ ಪಂದ್ಯದಲಿ ವೀರೇಂದ್ರ ಸೆಹ್ವಾಗ್ ಕಣಕ್ಕಿಳಿಯಲಿಲ್ಲ. ಇದು ಒಮ್ಮೆಲೇ ಎಲ್ಲರ ಅಚ್ಚರಿಗೆ ಕಾರಣವಾಯಿತು.ಈ ಸಂಬಂಧ ಪ್ರತಿಕ್ರಿಯೆ ನೀಡಿದ ಭಾರತ ತಂಡದ ನಾಯಕ ಮಹೇಂದ್ರ ಸಿಂಗ್ ದೋನಿ, `ಇದು ತಂಡದ ನಿರ್ಧಾರ. ರೋಹಿತ್ ಶರ್ಮ ಅವರಿಗೆ ಅವಕಾಶ ಮಾಡಿಕೊಡುವ ಹಿನ್ನೆಲೆಯಲ್ಲಿ ತೆಗೆದುಕೊಂಡ ನಿರ್ಧಾರವಿದು~ ಎಂದರು.`ಆದರೆ ಕಳಪೆ ಬೌಲಿಂಗ್ ಪ್ರದರ್ಶನದಿಂದಾಗಿ ಈ ಪಂದ್ಯ ಸೋಲಬೇಕಾಯಿತು. ಹಾಗೇ ಬ್ಯಾಟಿಂಗ್‌ನಲ್ಲಿ ಉತ್ತಮ ಆರಂಭ ಸಿಗಲಿಲ್ಲ~ ಎಂದು ಅವರು ನುಡಿದರು. ಸರಣಿಯಲ್ಲಿ ಶುಭಾರಂಭ ಮಾಡಿದ್ದಕ್ಕೆ ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್ ಕ್ಲಾರ್ಕ್ ಖುಷಿ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry