ಶನಿವಾರ, ಜನವರಿ 25, 2020
16 °C

ವೀರ ಯೋಧರಿಗೆ ‘ಗರುಡ’ ನಮಸ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀರ ಯೋಧರಿಗೆ ‘ಗರುಡ’ ನಮಸ್ಕಾರ

ಬೆಂಗಳೂರು: ಗರುಡ ಮಾಲ್‌ನಲ್ಲಿ ನಡೆಯುವ ಈ ವರ್ಷದ ಶಾಪಿಂಗ್‌ ಉತ್ಸವವನ್ನು ವೀರ ಯೋಧರಿಗೆ ಸಮರ್ಪಿಸಲಾಗಿದೆ.

ಯೋಧರಿಗೆ ಗೌರವು ಸಲ್ಲಿಸಲು ‘ಭಾರ­ತೀಯ ವೀರ ಯೋಧರಿಗೆ ಗರುಡ ನಮಸ್ಕಾರ’ ಎಂಬ ಶಾಪಿಂಗ್‌ ಉತ್ಸವ­ವನ್ನು ಶನಿವಾರದಿಂದ ಆಯೋಜಿಸಿದೆ.ಉತ್ಸವದ ಅಂಗವಾಗಿ ಮಾಲ್‌ನ ಹೊರ ಆವರಣದಲ್ಲಿ ಕಾರ್ಗಿಲ್ ಕದನ, ನೈಸರ್ಗಿಕ ವಿಕೋಪ ಎದುರಾದಾಗ ಜನರ ಪ್ರಾಣ, ಆಸ್ತಿ ರಕ್ಷಿಸುವ ಭಾರ­ತೀಯ ಯೋಧರ ಶ್ರಮದಾನ, ರಾಷ್ಟ್ರ­ಧ್ವಜಕ್ಕೆ ಸೆಲ್ಯೂಟ್ ಮಾಡುತ್ತಿರುವ ಸೈನಿಕರ ಪ್ರತಿಕೃತಿಗಳು  ನೋಡುಗರನ್ನು ಸೆಳೆಯುತ್ತಿವೆ.ಮಾಲ್‌ನ ಒಳಗೆ ಮುಂಬೈ ಮೇಲಿನ ಭಯೋ­ತ್ಪಾದಕರ ದಾಳಿಯನ್ನು ಹಿಮ್ಮೆ­ಟ್ಟಿ­ಸಿದ ಯೋಧರು, ಭಾರತ -ಚೀನಾ ಹಾಗೂ ಭಾರತ- ಪಾಕಿಸ್ತಾನ ನಡುವಿನ ಯುದ್ಧದ ಸನ್ನಿವೇಶಗಳ ಕಟೌಟ್‌­ಗಳನ್ನು ನಿಲ್ಲಿಸಲಾಗಿದೆ.ಮಾಲ್ ಒಳಗಿನ ಪ್ರತಿಯೊಂದು ಕಂಬಗಳಲ್ಲೂ ಭಾರತ ಸೇನೆಯ ಸಮಗ್ರ ಮಾಹಿತಿಯಿದೆ. ಜನರಲ್ ಕಾರ್ಯಪ್ಪ, ಜನರಲ್ ತಿಮ್ಮಯ್ಯ ಸೇರಿದಂತೆ ಸೇನಾ ಜನರಲ್‌, ಭೂ ಸೇನೆ, ವಾಯು ಸೇನೆ ಹಾಗೂ ನೌಕಾಪಡೆಯ ಧ್ವಜ ಹಾಗೂ ಲಾಂಛನಗಳು, ಸೇನಾ ಬ್ಯಾಂಡ್, ಪದಕಗಳು, ಪ್ರಶಸ್ತಿ ಕುರಿತ ಮಾಹಿತಿ, ವಾಯು ಸೇನೆಯ ಫೈಟರ್ ಜೆಟ್ ಇತ್ಯಾದಿಗಳ ಕುರಿತು ಸಮಗ್ರ ಮಾಹಿತಿಯಿದೆ.ಡಿ.  25 ರಂದು ಸಂಜೆ 6.30ಕ್ಕೆ ವಿಶೇಷವಾದ ಸೇನಾ ಬ್ಯಾಂಡ್ ಕೇಳುವ ಹಾಗೂ ನೋಡುವ ಅವಕಾಶವಿದೆ. ಉತ್ಸವವು ಜ.1 ರವರೆಗೆ ನಡೆಯಲಿದೆ.ಶಾಪಿಂಗ್‌ ಉತ್ಸವವನ್ನು ಶನಿವಾರ ಮೇಜರ್ ಜನರಲ್ ಎ.ಕೆ. ಸಿಂಗ್ ಹಾಗೂ ಗರುಡ ಸಮೂಹದ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಜಿ. ಉದಯ್ ಉದ್ಘಾಟಿಸಿದರು.ಭಾರತೀಯ ಸೇನೆಯ ಅಂಚೆಚೀಟಿ ಸಂಗ್ರಹಗಳ ಪ್ರದರ್ಶನವನ್ನು ಏರ್ಪಡಿಸ­-ಲಾಗಿತ್ತು. ಗರುಡ ಮಾಲ್ ತ್ರಿವರ್ಣ­ಗಳಿಂದ ಸಿಂಗಾರಗೊಂಡಿದೆ.

ಪ್ರತಿಕ್ರಿಯಿಸಿ (+)