ವೀಸಾ ಒಪ್ಪಂದ ನವೀಕರಣಕ್ಕೆ ಸಮ್ಮತಿ

7

ವೀಸಾ ಒಪ್ಪಂದ ನವೀಕರಣಕ್ಕೆ ಸಮ್ಮತಿ

Published:
Updated:

ಇಸ್ಲಾಮಾಬಾದ್(ಪಿಟಿಐ);ವೀಸಾ ಒಪ್ಪಂದ ನವೀಕರಣ ಸೇರಿದಂತೆ ದ್ವಿಪಕ್ಷೀಯ ವ್ಯಾಪಾರ ವಹಿವಾಟು ಉತ್ತೇಜಿಸಲು ಉಭಯ ದೇಶಗಳ ನಡುವೆ ಇರುವ ವಾಣಿಜ್ಯ ನಿರ್ಬಂಧಗಳನ್ನು ಮುಕ್ತಗೊಳಿಸಲು ಭಾರತ ಮತ್ತು ಪಾಕಿಸ್ತಾನ ನಿರ್ಧರಿಸಿವೆ.ಪಾಕಿಸ್ತಾನದಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿನ  ಮತ್ತು ಭಾರತದಲ್ಲಿ ಪಾಕಿಸ್ತಾನ ಸೆಂಟ್ರಲ್ ಬ್ಯಾಂಕಿನ ಶಾಖೆಗಳನ್ನು ಪ್ರಾರಂಭಿಸಲು ಉಭಯ ದೇಶಗಳು ಸಮ್ಮತಿ ಸೂಚಿಸಿವೆ.  ಕೇಂದ್ರ ಕೈಗಾರಿಕಾ ಸಚಿವ ಆನಂದ ಶರ್ಮಾ ನೇತೃತ್ವದಲ್ಲಿರುವ 120 ಸದಸ್ಯರ ನಿಯೋಗ ಪಾಕಿಸ್ತಾನದ ವಾಣಿಜ್ಯ ಸಚಿವರ ಜತೆ ಚರ್ಚೆ ನಡೆಸಿ ಈ ಒಪ್ಪಂದಕ್ಕೆ ಬಂದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry