ವೀಸಾ ಶುಲ್ಕ: ಚುನಾವಣೆ ಬಳಿಕ ಮರುಪರಿಶೀಲನೆ

7

ವೀಸಾ ಶುಲ್ಕ: ಚುನಾವಣೆ ಬಳಿಕ ಮರುಪರಿಶೀಲನೆ

Published:
Updated:

ನ್ಯೂಯಾರ್ಕ್ (ಐಎಎನ್‌ಎಸ್):  ವೀಸಾ ಶುಲ್ಕ ಹೆಚ್ಚಳ ವಿಚಾರವನ್ನು ಅಧ್ಯಕ್ಷೀಯ ಚುನಾವಣೆಯ ಬಳಿಕ ಮರುಪರಿಶೀಲಿಸುವುದಾಗಿ ಅಮೆರಿಕ ಭಾರತಕ್ಕೆ ಹೇಳಿದೆ.ಅಮೆರಿಕ ವಿದೇಶಾಂಗ ಇಲಾಖೆ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಮತ್ತು ವಿದೇಶಾಂಗ  ವ್ಯವಹಾರಗಳ ಸಚಿವ ಎಸ್.ಎಂ.ಕೃಷ್ಣ ಅವರ ನಡುವಿನ ಮಾತುಕತೆಯ ವೇಳೆ ಅಮೆರಿಕ ಈ ವಿಚಾರವನ್ನು ಭಾರತಕ್ಕೆ ಮನವರಿಕೆ ಮಾಡಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.ವೀಸಾ ಶುಲ್ಕ ಹೆಚ್ಚಳ ವಿಚಾರದಲ್ಲಿ ಭಾರತ ವ್ಯಕ್ತಪಡಿಸಿರುವ ಕಳವಳ ಅಮೆರಿಕಕ್ಕೆ ಅರ್ಥವಾಗುತ್ತದೆ. ನವೆಂಬರ್‌ನಲ್ಲಿ ನಡೆಯುವ ಅಧ್ಯಕ್ಷೀಯ ಚುನಾವಣೆ ಬಳಿಕ ಈ ವಿಚಾರವನ್ನು ಸರ್ಕಾರ ವಿಸ್ತೃತವಾಗಿ ಪುನರ್ ಪರಿಶೀಲನೆ ನಡೆಸಲಿದೆ ಎಂದು ಹಿಲರಿ ಕ್ಲಿಂಟನ್ ಅವರು ಎಸ್. ಎಂ. ಕೃಷ್ಣ ಅವರಿಗೆ ತಿಳಿಸಿರುವುದಾಗಿ ಮೂಲಗಳು ತಿಳಿಸಿವೆ.ವೃತ್ತಿಪರರಿಗೆ ನೀಡುವ ವೀಸಾದ ಶುಲ್ಕವನ್ನು ಅಮೆರಿಕ 2010ರಲ್ಲಿ ಏರಿಸಿತ್ತು. ಇದನ್ನು ಭಾರತ ತೀವ್ರವಾಗಿ ವಿರೋಧಿಸಿತ್ತು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry